Saturday, June 25, 2022

Latest Posts

ಚಿನ್ನಾಭರಣ ಕಳ್ಳತನ ಪ್ರಕರಣ: ಆರೋಪಿ ಬಂಧನ

ಹೊಸ ದಿಗಂತ ವರದಿ, ವಿಜಯಪುರ:

ಜಿಲ್ಲೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, 6 ಲಕ್ಷ ರೂ. ಮೌಲ್ಯದ 116 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ತಾಲೂಕಿನ ಡೋಮನಾಳ ತಾಂಡಾ- 2 ರ ಕಿರಣ ವಾಚು ರಾಠೋಡ (26) ಬಂಧಿತ ಆರೋಪಿ.
ಆರೋಪಿ ಕಿರಣ ರಾಠೋಡ ಈತನು ಡೋಮನಾಳ ತಾಂಡಾ- 2 ರ ಮನೆಯೊಂದರಲ್ಲಿ, ಕಬ್ಬಿಣದ ಟ್ರೇಜರಿ ಮುರಿದು 53 ಗ್ರಾಂ ತೂಕದ ಬಂಗಾರದ ಗಂಠಾಣ ತಾಳಿ ಸರ, 30 ಗ್ರಾಂ ತೂಕದ ಬಂಗಾರದ ಚೈನ್, 9 ಗ್ರಾಂ ತೂಕದ ಬಂಗಾರದ ಕಿವಿಯೋಲೆ, 13 ಗ್ರಾಂ ತೂಕದ 25 ಉಂಗುರುಗಳು ಒಟ್ಟು ಸೇರಿದಂತೆ 116 ಗ್ರಾಂ ತೂಕದ, 6 ಲಕ್ಷ ರೂ. ಮೌಲ್ಯದ ಹಳೆಯ ಬಂಗಾರದ ಸಮಾನುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
ಎಸ್ಪಿ ಅನುಪಮ್ ಅಗರವಾಲ್ ಮಾರ್ಗದರ್ಶನದಲ್ಲಿ, ಎಎಸ್ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಕೆ.ಸಿ. ಲಕ್ಷ್ಮೀನಾರಾಯಣ, ಗ್ರಾಮೀಣ ವೃತ್ತ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದಲ್ಲಿ, ಪಿಎಸ್‌ಐಗಳಾದ ಆನಂದ ಠಕ್ಕಣ್ಣನವರ, ಆರ್.ಎ. ದಿನ್ನಿ ಸೇರಿದಂತೆ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss