Sunday, June 26, 2022

Latest Posts

ಚಿನ್ನ ಕಳ್ಳಸಾಗಣೆ| ಮುಖ್ಯಮಂತ್ರಿ ಪಿಣರಾಯಿ ತಲೆದಂಡಕ್ಕೆ ಕಾಂಗ್ರೆಸ್ ಪಟ್ಟು; ದುಬೈಯಲ್ಲಿ ಫರೀದ್ ವಿಚಾರಣೆ , ಗಡೀಪಾರು ಸಾಧ್ಯತೆ

ಹೊಸದಿಲ್ಲಿ/ದುಬೈ: ಕೇರಳದ ತಿರುವನಂತಪುರಂನಲ್ಲಿ ಇತ್ತೀಚೆಗೆ ಪತ್ತೆಯಾದ ಭಾರೀ ಚಿನ್ನ ಕಳ್ಳಸಾಗಣೆ ಪ್ರಕರಣದ ೩ನೇ ಪ್ರಮುಖ ಆರೋಪಿ, ಸದ್ಯ ದುಬೈಯಲ್ಲಿರುವ ಫೈಸಲ್ ಫರೀದ್‌ನನ್ನು ದುಬೈ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈತನನ್ನು ಭಾರತಕ್ಕೆ ಗಡೀಪಾರುಗೊಳಿಸುವ ಸಾಧ್ಯತೆ ಇದೆ.ಈತನನ್ನು ವಿಚಾರಣೆಗೊಳಪಡಿಸಲು ಭಾರತೀಯ ತನಿಖಾ ಸಂಸ್ಥೆಗಳು ಸಜ್ಜಾಗಿದ್ದು, ಉಭಯ ದೇಶಗಳ ನಡುವೆ ೧೯೯೯ರ ಗಡೀಪಾರು ಒಪ್ಪಂದ ಜಾರಿಯಲ್ಲಿರುವ ಕಾರಣ ಯುಎಇ ಈತನನ್ನು ಭಾರತಕ್ಕೆ ಗಡೀಪಾರುಗೊಳಿಸಬೇಕಾಗುತ್ತದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಈತನ ಬಂಧನಕ್ಕೆ ವಾರಂಟ್ ಹೊರಡಿಸಿದೆ. ಈ ನಡುವೆ ಕೇರಳದಲ್ಲಿ ಪ್ರತಿಪಕ್ಷಗಳು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.
ದುಬೈಯಿಂದ ಈತನೇ ಕೇರಳಕ್ಕೆ ಚಿನ್ನ ಕಳುಹಿಸಿದ್ದು, ೧೪.೮ಕೋ.ರೂ.ಮೌಲ್ಯದ ೩೧ಕಿಲೋ ಚಿನ್ನವನ್ನು ಯುಎಇ ಕಾನ್ಸುಲೇಟ್ ಜನರಲ್ ಮೂಲಕ ಕಳುಹಿಸಲಾಗಿದೆ.ಅಲ್ಲಿ ಈತನಿಗೀಗ ಪ್ರಯಾಣ ನಿರ್ಬಂಧಗಳನ್ನು ವಿಸಲಾಗಿದೆ.ಈತನ ಪಾಸ್‌ಪೋರ್ಟನ್ನು ಹಿಂಪಡೆಯಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು ತಿಳಿಸಿವೆ.
ಚಿನ್ನದ ಪಾರ್ಸೆಲ್‌ನಲ್ಲಿ ಈತನ ದುಬೈ ವಿಳಾಸ ನೀಡಲಾಗಿದ್ದು, ವಿಲ್ಲಾ ನಂ.೫, ಅಲ್ ರಶೀದಿಯಾ, ದುಬೈ ಎಂದು ನಮೂದಿಸಲಾಗಿದೆ.ಫೈಸಲ್ ತನ್ನ ಕುಟುಂಬದೊಂದಿಗೆ ಅಲ್ಲಿ ವಾಸವಾಗಿದ್ದಾನೆ.
ಪಿಣರಾಯಿ ರಾಜೀನಾಮೆಗೆ ಚೆನ್ನಿತ್ತಲ ಪಟ್ಟು
ಭಾರೀ ಪ್ರಮಾಣದ ಚಿನ್ನ ಕಳ್ಳಸಾಗಣೆ ಕೇಸಿಗೆ ಸಂಬಂಧಿಸಿ ತನ್ನ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ.ಅರು ರಾಜೀನಾಮೆ ನೀಡಲೇಬೇಕು ಎಂದು ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆಗ್ರಹಿಸಿದ್ದಾರೆ. ಈಗಾಗಲೇ ವಿಪಕ್ಷ ಕಾಂಗ್ರೆಸ್ ಶಾಸಕ ವಿ.ಡಿ.ಸತೀಶನ್ ಅವರು ಎಡರಂಗ ಸರಕಾರದ ವಿರುದ್ಧ ‘ಅವಿಶ್ವಾಸ ಗೊತ್ತುವಳಿ’ನೋಟಿಸ್ ನೀಡಿದ್ದಾರೆ .ಇದು ಜು.೨೭ಕ್ಕೆ ಹಣಕಾಸು ಮಸೂದೆಯನ್ನು ಕೈಗೆತ್ತಿಕೊಳ್ಳಲಿರುವ ಕೇರಳ ವಿಧಾನಸಭಾ ಅವೇಶನದಲ್ಲಿ ಮಂಡನೆಯಾಗಲಿದೆ.ಆದರೆ ವಿಪಕ್ಷ ಕಡೆಯಲ್ಲಿ ೪ ೩ಸದಸ್ಯರಿದ್ದರೆ ಆಳುವ ಕೂಟದಲ್ಲಿ ೯೧ ಮಂದಿ ಇರುವ ಕಾರಣ ತಕ್ಷಣಕ್ಕೆ ಈ ಮಂಡನೆ ಪಿಣರಾಯಿ ಸರಕಾರಕ್ಕೆ ಅಪಾಯ ತರದು. ಆದರೆ ಸರಕಾರದ ವಿಶ್ವಾಸಾರ್ಹತೆ ಬಗ್ಗೆ ರಾಜ್ಯದ ಜನತೆಗೆ ಪ್ರಶ್ನೆ ಮಾಡಲು ಎಡೆ ಮಾಡಿಕೊಡಲಿದೆ.
ಹಲವು ಹಗರಣಗಳು
ಕೇರಳದ ಆಳುವ ಕಮ್ಯುನಿಸ್ಟ್ ಸರಕಾರವು ಸ್ಪ್ರಿಂಕ್ಲರ್ ವ್ಯವಹಾರ, ಪಂಪಾದಿಂದ ಮರಳು ತೆಗೆಯುವ ವಿವಾದ, ಜರ್ಮನ್ ಕಂಪೆನಿಯೊಂದರ ಜೊತೆಗಿನ ಬೆವ್ಕೋ ಆಪ್ ವಿವಾದ ಸೇರಿದಂತೆ ಹಲವು ಹಗರಣಗಳ ಸುಳಿಯಲ್ಲಿ ಸಿಲುಕಿದ್ದು, ಇವು ಮುಖ್ಯಮಂತ್ರಿ ಪಿಣರಾಯಿ ಕಚೇರಿಯನ್ನೇ ಸುತ್ತಿಕೊಂಡಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.
ಉನ್ನತ ಶಿಕ್ಷಣ ಸಚಿವನಿಗೆ ಗಿಫ್ಟ್ !
ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಈಗಾಗಲೇ ಯುಎಇ ಕಾನ್ಸುಲೇಟ್‌ನಿಂದ ‘ಗಿಫ್ಟ್’ ಸ್ವೀಕರಿಸಿದ್ದನ್ನು ಒಪ್ಪಿಕೊಳ್ಳಬೇಕಾಗಿ ಬಂದಿದ್ದು, ಇದನ್ನು ಕೇಂದ್ರದ ಅನುಮತಿಯಿಲ್ಲದೆಯೇ ರಮ್ಜಾನ್ ಕಿಟ್‌ಗಳ ರೂಪದಲ್ಲಿ ಸ್ವೀಕರಿಸಲಾಗಿತ್ತು.ಆದರೆ ಸಚಿವ ಜಲೀಲ್ ಮತ್ತು ಅವರ ಕಚೇರಿ ಸಿಬ್ಬಂದಿ ಚಿನ್ನ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವ ಗಂಭೀರ ಆರೋಪಕ್ಕೆ ಈಡಾಗಿರುವುದು ಕೇರಳದಲ್ಲೀಗ ಜನರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಉನ್ನತ ಶಿಕ್ಷಣ ಸಚಿವ ಕಳ್ಳಸಾಗಣೆಯಂತಹ ಗಂಭೀರ ಪ್ರಕರಣದ ನಂಟು ಹೊಂದಿರುವುದು ಕೇರಳದ ಪ್ರಜ್ಞಾವಂತರಲ್ಲಿ ಆಘಾತ ಮೂಡಿಸಿದೆ.
ಎಡರಂಗ ಸರಕಾರದಲ್ಲಿ ಸಿಎಂ ಪಿಎ ಅಮಾನತಾದ ೬ನೇ ಅಧಿಕಾರಿ
ಚಿನ್ನಕಳ್ಳಸಾಗಣೆ ಪ್ರಕರಣದಲ್ಲಿ ನಂಟು ಹೊಂದಿರುವ , ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಎಡರಂಗ ಸರಕಾರದ ಅವಯಲ್ಲಿ ಅಮಾನತುಗೊಂಡ ೬ನೇ ಪ್ರಮುಖ ಅಧಿಕಾರಿಯಾಗಿರುವುದು ಪಿಣರಾಯಿ ಸರಕಾರದ ವಿಶ್ವಾಸಾರ್ಹತೆಯತ್ತ ಬೆರಳು ಮಾಡುವಂತೆ ಮಾಡಿದೆ.ಈಗಾಗಲೇ ಬೇರೆ ಬೇರೆ ಪ್ರಕರಣಗಳಲ್ಲಿ ಮೂವರು ಐಎಎಸ್ ಮತ್ತು ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗಿ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss