ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ವಪ್ನಾ ಸುರೇಶ್ ರನ್ನು ಇಡಿ ಅಟಕುಲಂಗರ ಮಹಿಳಾ ಕಾರಾಗೃಹದಲ್ಲಿ ಎರಡು ದಿನ ತನಿಖೆ ಆರಂಭಿಸಿದೆ.
ಇಡಿ ಈ ಹಿಂದೆಯೂ ಸ್ವಪ್ನಾರನ್ನು ವಿಚಾರಣೆಗೆ ನಡೆಸಿದ್ದು, ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿದ ಹಣ ವರ್ಗಾವಣೆ ಕುರಿತು ಮಾಹಿತಿ ಪಡೆದು, ಮಾಜಿ ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಇಡಿ ವಶದಲ್ಲಿರಿಸಿದೆ.
ಇಂದು ಬೆಳಗ್ಗೆ 10.30ಕ್ಕೆ ಇಡಿ ವಿಚಾರಣೆ ನಡೆಸಿದೆ. ಇಡಿ, ಎನ್ ಐಎ ಮತ್ತು ಕಸ್ಟಮ್ಸ್ ಇಲಾಖೆಯು ತನಿಖೆ ನಡೆಸುತ್ತಿದೆ. ಜುಲೈ 5 ರಂದು ತಿರುವನಂತಪುರಂನಲ್ಲಿ ಕಸ್ಟಮ್ಸ್ನಿಂದ 14.82 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ರಾಜತಾಂತ್ರಿಕ ಸರಕುಗಳಲ್ಲಿ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧ ತನಿಖೆ ನಡೆಯುತ್ತಿದೆ.