ಚಿರು ಬದಲಿಗೆ ಯಾರು ಅಗ್ತಾರೆ ನಾಯಕ ? ಹೊಸ ಅವತಾರದಲ್ಲಿ ರಚಿತಾರಾಮ್

0
51

ಸಾಮಾನ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರಿಗೆ ಬೇರೆ ಭಾಷೆಯಿಂದ ಬಂದೆ ಬರುತ್ತದೆ. ಈಗಾಗಲೇ ಕನ್ನಡ ನಟಿಯರು ಪರ ಭಾಷೆಯ ಕಡೆಗೆ ಹೋಗಿದ್ದಾರೆ… ಅಲ್ಲಿಂದನೆ ನಮ್ಮ ಕನ್ನಡ ಚಿತ್ರರಂಗಕ್ಕೂ ಬಂದಿದ್ದಾರೆ.. ಅದೇ ರೀತಿ ಈಗ ಸ್ಯಾಂಡಲ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಆ ಸಾಲಿಗೆ ಸೇರ್ಪಡೆಯಾಗಿದ್ದಾರೆ. ತೆಲುಗು ರಙಗಕ್ಕೆ ಮುಖಮಾಡಿ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಾರೆ. ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಟಿದ್ದಾರೆ. ಸದ್ಯ ರಚಿತಾ ರಾಮ್ ಹೈದರಾಬಾದ್ ನಲ್ಲಿ ಇದ್ದಾರೆ. ತೆಲುಗು ನಟ ಕಲ್ಯಾಣ್ ದೇವ್ ಗೆ ಜೋಡಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹಾಗಂತ ಅವರು ಅಲ್ಲೆ ಮುಂದುವರಿಯುತ್ತಾರೆ ಎಂದು ಅಲ್ಲ, ಕನ್ನಡದಲ್ಲೂ ಸಹ ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಇತ್ತೀಚೆಗೆ ತೆಲುಗು ಸಿನಿಮಾದ ಶೂಟಿಂಗ್ ಫೋಟೊಗಳನ್ನು ಹಂಚಿಕೊಂಡ ರಚಿತಾ ರಾಮ್ ಈಗ ಹೊಸ ಅವತಾರದ ಮೂಲಕ ಪ್ರೇಕ್ಷಕರ ಮುಂದೆ ಎಂಟ್ರಿಕೊಟ್ಟಿದ್ದಾರೆ. ನಟ  ಚಿರಂಜೀವಿ ಸರ್ಜಾ  ಮಿಸ್ಸಿಂಗ್ ಎನ್ನುವ ರಚಿತಾ ಪೋಸ್ಟರ್ ಹಿಡಿದು ನಿಂತಿರುವ ಲುಕ್ ಅನ್ನು ರಿಲೀಸ್ ಮಾಡಲಾಗಿತ್ತು. ಆ ನಂತರ ಸಿನಿಮಾದ ಬಗ್ಗೆ ಯಾವುದೆ ಸುದ್ದಿ ಇರಲಿಲ್ಲ. ಕಥೆಯಲ್ಲಿ ಒಂದಿಷ್ಟು ಬದಲಾವಣೆಯಾಗಿದೆ ಎಂದು ಹೇಳಲಾಗಿತ್ತು. ಅಲ್ಲದೆ ಚಿತ್ರಕ್ಕೆ ನಟ ಚಿರು ಸರ್ಜಾ ಕೂಡ ಎಂಟ್ರಿ ಕೊಟ್ಟಿದ್ದರು. ಆದರೀಗ ಚಿರು ಇಲ್ಲ. ಬದಲಾಗಿ  ಅವರ ಪಾತ್ರಕ್ಕೆ ಯಾರು ಬರ್ತಿದ್ದಾರೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಹಳೆಯ ಕಥೆಯನ್ನೆ ಮುಂದುವರೆಸುತ್ತಾರಾ ಅಥವಾ ಚಿರು ಜಾಗಕ್ಕೆ ಬೇರೆ ನಟ ಎಂಟ್ರಿ ಕೊಡ್ತಾರಾ ಎನ್ನುವುದು ಸಿನಿಪ್ರಿಯರಲ್ಲಿ ಪ್ರಶ್ನೆ  ಕಾಡತೊಡಗಿದೆ . ಇದಕ್ಕೆಲ ಉತ್ತರವನ್ನ ಏಪ್ರಿಲ್  ಸಿನಿತಂಡವೇ ಹೇಳಿಕೊಳ್ಳಬೇಕಿದೆ. ಆದರೆ ಇದೀಗ ನಟಿ ರಚಿತಾ ರಾಮ್  ಸಿನಿಮಾದ  ಮತ್ತೊಂದು ಪೋಸ್ಟರ್ ಅನ್ನು ಹಣ್ಣುಚಿಕೊಂಡಿದ್ದಾರೆ.  ರಕ್ತ ಸಿಕ್ತವಾಗಿರುವ ಮುಖ, ಕೂದಲನ್ನು ಹರಿಡಿಕೊಂಡು ಗಂಭೀರವಾಗಿ ಕುಳಿತಿರುವ ರಚಿತಾ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಪೋಸ್ಟರ್ ಜೊತೆಗೆ ‘ಕೆಲವು ಪಾತ್ರಗಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಬೇಕಿತ್ತು. ಆದರೆ ಆಗಲೆ ಲಾಕ್ ಡೌನ್ ಚಿತ್ರತಂಡದ ಲೆಕ್ಕಾಚಾರವನ್ನೆ ಬದಲಾಯಿಸಿದೆ. ರಚಿತಾ ರಾಮ್ ಹೊಸ ಪೋಸ್ಟರ್ ಶೇರ್ ಮಾಡುವ ಮೂಲಕ ಮತ್ತೆ ಏಪ್ರಿಲ್ ಸದ್ದು ಸುದ್ದಿಯಲ್ಲಿದೆ. ಆದರೆ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಭವಾಗಲಿದೆ, ಚಿರು ಪಾತ್ರಕ್ಕೆ ಯಾರು ಬರಲಿದ್ದಾರೆ ಎನ್ನುವುದು ಇನ್ನೂ ಅಧಿಕೃತವಾಗಿಲ್ಲ.ರಚಿತಾ ರಾಮ್ ಬಳಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಚಿತಾ ಏಕ್ ಲವ್ ಯಾ, 100, ಡಾಲಿ, ಸೀರೆ, ಸಂಜು ಅಲಿಯಾಸ್ ಸಂಜಯ್, ಲಿಲ್ಲಿ ಸೇರಿದ್ದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತೆಲುಗಿನ ಸೂಪರ್ ಮಚ್ಚಿ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.ಇನ್ನೇನು  ಸರ್ಕಾರ ಆದೇಶ ಮೇರೆಗೆ ಚಿತ್ರಮಂದಿರ ಓಪನ್ ಆಗುತ್ತಿದಂತೆ ಅವರ ಅಭಿನಯನದ ಸಿನಿಮಾಗಳು ಬಿಡುಗಡೆ ಯಾಗಲಿದೆ. ಏಪ್ರಿಲ್ ಚಿತ್ರಕ್ಕೆ ಸತ್ಯ ರಾಯಲ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.ಎಂಎಂ’ ಖ್ಯಾತಿಯ ನಿರ್ಮಾಪಕ ನಾರಾಯಣ ಬಾಬು ಬಂಡವಾಳ ಹೂಡುತ್ತಿದ್ದಾರೆ

LEAVE A REPLY

Please enter your comment!
Please enter your name here