Wednesday, June 29, 2022

Latest Posts

ಚಿರು-ಮೇಘನಾ ಮಗು ನೋಡಲು ಕೇರಳದಿಂದ ಬಂದ ಸ್ಟಾರ್ ಕಪಲ್!

ಬೆಂಗಳೂರು: ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.
ಮೇಘನಾ-ಚಿರು ಮಗುವನ್ನು ನೋಡುವುದಕ್ಕೆ ಮಲಯಾಳಂನ ಸ್ಟಾರ್ ದಂಪತಿ ಆಗಮಿಸಿದ್ದಾರೆ.
ಹೌದು,ಮಲಯಾಳಂನ ಸ್ಟಾರ್ ಕಪಲ್ ನಜ್ರಿಯಾ ನಾಜಿಮ್ ಹಾಗೂ ಫಹಾದ್ ಫಾಸಿಲ್ ಆಸ್ಪತ್ರೆಗೆ ಬಂದು ತಾಯಿ ಮಗು ಆರೋಗ್ಯ ವಿಚಾರಿಸಿದ್ದಾರೆ.
ಮೇಘನಾ -ಚಿರುಗೆ ಆತ್ಮೀಯರಾದ ನಜ್ರಿಯಾ ಫಹಾದ್ ಈಗಾಗಲೇ ಚಿರು-ಮೇಘನಾ ಮದುವೆ ಸಂಭ್ರಮದಲ್ಲೂ ಕಾಣಿಸಿಕೊಂಡಿದ್ದರು. ಇನ್ಸ್ಟಾಗ್ರಾಂನಲ್ಲಿ ಮೇಘನಾ-ನಶ್ರಿಯಾ ಜೊತೆಗಿರುವ ಪೋಟೊಗಳಲ್ಲಿ ಇವರ ಆತ್ಮೀಯತೆ ಕಾಣುತ್ತದೆ. ನಿನ್ನೆ ತಾನೆ ಚೆನ್ನೈನಿಂದ ಸರ್ಜಾ ದಂಪತಿ ಹಾಗೂ ಪುತ್ರಿ ಐಶ್ವರ್ಯ ಮಗು ನೋಡಲು ಬಂದಿದ್ದು, ಇಂದು ನಜ್ರಿಯಾ ದಂಪತಿ ಆಸ್ಪತ್ರೆಗೆ ತೆರಳಿದ್ದಾರೆ.
ಮಲಯಾಳಂನಲ್ಲಿ ಮೇಘನಾ ಸಾಕಷ್ಟು ಸಿನಿಮಾ ಮಾಡಿದ್ದು, ನಜ್ರಿಯಾ ಮೇಘನಾಳ ಆತ್ಮೀಯ ಗೆಳತಿಯರಲ್ಲಿ ಒಬ್ಬರು. ಸರ್ಜಾ ಕುಟುಂಬದ ಖುಷಿ ಹಾಗೂ ದುಃಖದ ಸಂದರ್ಭಗಳಲ್ಲೂ ನಜ್ರಿಯಾ ಫಹಾದ್ ಪಾಲ್ಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss