ಚಿರು ನಿಧನದ ಬಳಿಕ ಅವರ ಸಿನಿಮಾಕ್ಕೆ ಯಾರು ಡಬ್ ಮಾಡುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿತ್ತು.ಆದ್ರೆ ಅದಕ್ಕೀಗ ಉತ್ತರ ಸಿಕ್ಕಿದೆ ಲಾಕ್ಡೌನ್ ಆಗುವ ಹಿಂದಿನ ದಿನ ಬಿಡುಗಡೆಯಾಗಿದ್ದ ಚಿರಂಜೀವಿ ಸರ್ಜಾ ನಟನೆಯ ‘ಶಿವಾರ್ಜುನ’ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಲಿದೆಯಂತೆ.ಚಿರಂಜೀವಿ ಸರ್ಜಾ ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡುತ್ತಾರಾ?. ಚಿರು ನಿಧನದ ಬಳಿಕ ಸ್ಯಾಂಡಲ್ವುಡ್ನಲ್ಲಿ ಈ ಪ್ರಶ್ನೆ ಕೇಳಿಬರುತ್ತಲೇ ಇತ್ತು. ಆದರೆ, ಸದ್ಯ ಇದಕ್ಕೆ ಉತ್ತರ ದಕ್ಕಿದೆ. ಚಿರು ಅಭಿನಯದ ಚಿತ್ರಕ್ಕೆ ತಮ್ಮ ಧ್ರುವ ಸರ್ಜಾ ವಾಯ್ಸ್ ಕೊಡಲಿದ್ದಾರೆಯೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಗ್ಗೆ ಅವರ ಕುಟುಂಬದ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.ಅವರ ಕೆಲವೊಂದು ಸಿನಿಮಾಗಳು ಅರ್ಧ ಚಿತ್ರೀಕರಣಗೊಂಡಿದ್ದರೆ ಮತ್ತೆ ಕೆಲವು ಚಿತ್ರಗಳ ಡಬ್ಬಿಂಗ್ ಮತ್ತು ಇನ್ನಿತರ ಕೆಲಸಗಳು ಬಾಕಿಯಿವೆ. ಅದರಲ್ಲಿ ಪ್ರಮುಖವಾಗಿ ರಾಜ ಮಾರ್ತಾಂಡ ಮತ್ತು ಕ್ಷತ್ರಿಯ ಚಿತ್ರಗಳೆರಡೂ ಅಂತಿಮ ಹಂತದಲ್ಲಿದೆ.ಕ್ಷತ್ರಿಯ’ ಚಿತ್ರದ ಶೇ 60 ಭಾಗದಷ್ಟು ಚಿತ್ರೀಕರಣ ಮುಗಿದಿದ್ದರೆ, ‘ರಾಜ ಮಾರ್ತಾಂಡ’ ಚಿತ್ರದ ಒಂದು ಹಾಡು ಮತ್ತು ಚಿರು ಭಾಗದ ಡಬ್ಬಿಂಗ್ ಮಾತ್ರ ಬಾಕಿ ಇತ್ತು. ಈಗ ಡಬ್ಬಿಂಗ್ ಕೆಲಸವನ್ನು ಧ್ರುವ ಮುಗಿಸಿಕೊಡುತ್ತಾರಂತೆ.