ಚಿರು ಸರ್ಜಾ ಸಿನಿಮಾ ರಾಜಮಾರ್ತಾಂಡ ಸಿನಿಮಾಕ್ಕೆ ದರ್ಶನ್ ಧ್ವನಿ

0
48

ಚಿರಂಜೀವಿ ಸರ್ಜಾ ಅಗಲಿದ ನೋವು ಇನ್ನೂ ಮಾಸಿಲ್ಲ. ಅವರ ಕುಟುಂಬ, ಸ್ನೇಹಿತರು ಆಘಾತದಿಂದ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.ಈ ಸಮಯದಲ್ಲಿ ಚಿರು ಸರ್ಜಾ ಸಿನಿಮಾಗಳಿಗೆ ಸಹಾಯ ಮಾಡಲು ದರ್ಶನ್ ರೆಡಿಯಾಗಿದ್ದಾರೆ. ಚಿರು ಸರ್ಜಾ ಅಭಿನಯದ ಸಿನಿಮಾಕ್ಕೆ ಧ್ವನಿ ನೀಡುವುದಾಗಿ ದರ್ಶನ್ ಸ್ವತಃ ಮುಂದೆ ಬಂದಿದ್ದಾರೆ.ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ತಿಯಾಗಿದ್ದು, ಡಬ್ಬಿಂಗ್ ಮಾತ್ರವೇ ಬಾಕಿ ಇದೆ. ಈ ಸಿನಿಮಾಕ್ಕೆ ಧ್ವನಿ ನೀಡುವುದಾಗಿ ಸ್ವತಃ ದರ್ಶನ್ ಅವರೇ ಚಿತ್ರತಂಡಕ್ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here