ನೋಯ್ಡಾ: ಭಾರತದ ವಿರುದ್ಧ ಕುಟಿಲ ಹುನ್ನಾರ ನಡೆಸಿರುವ ಚೀನಾಕ್ಕೆ ಬುದ್ಧಿ ಕಲಿಸಲು ಮುಂದಾಗಿರುವ ಅಖಿಲ ಭಾರತೀಯ ವರ್ತಕರ ಒಕ್ಕೂಟ(ಸಿಎಟಿಐ)ವು ಇದೀಗ, ರಕ್ಷಾ ಬಂಧನದ ಸಂದರ್ಭ ಚೀನಾದಿಂದ ಆಮದಾಗುತ್ತಿದ್ದ ರಕ್ಷೆಗಳನ್ನು ಇನ್ನು ಮುಂದೆ ಆಮದು ಮಾಡದಿರಲು ನಿರ್ಧರಿಸಿದೆ. ಈ ವರೆಗೆ ಚೀನಾ ಭಾರತಕ್ಕೆ ರಾಖಿಗಳನ್ನು ರಫ್ತು ಮಾಡಿಯೇ ವರ್ಷಕ್ಕೆ ಸುಮಾರು ೪೦೦೦ಕೋ.ರೂ.ಗಳನ್ನು ಬಾಚಿಕೊಳ್ಳುತ್ತಿತ್ತು !ಇದಕ್ಕೆ ವಿದಾಯ ಹೇಳುವ ಮೂಲಕ ಚೀನಾಕ್ಕೆ ಪಾಠ ಕಲಿಸಲು ಭಾರತೀಯ ವ್ಯಾಪಾರಿಗಳು ಮುಂದಾಗಿದ್ದಾರೆ .
ಈ ಬಾರಿ ಸ್ವದೇಶಿಯ ರಕ್ಷೆ ಮತ್ತು ವಿವಿಧ ರೀತಿಯ ರಾಖಿಗಳನ್ನು ಬಳಸಲು “ಹಿಂದುಸ್ಥಾನಿ ರಾಖಿ” ಎಂಬ ಸಂಕಲ್ಪ ಕೈಗೊಳ್ಳಲಾಗಿದೆ. ಇಷ್ಟಕ್ಕೇ ನಿಲ್ಲದ ಸಿಐಟಿಐಯು ದೇಶದ ಯೋಧರಿಗಾಗಿ ೫೦೦೦ರಾಖಿಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸುವ ಮೂಲಕ ತನ್ನ ರಾಷ್ಟ್ರೀಯ ಸ್ವಾಭಿಮಾನಿ ನಿಲುವನ್ನು ವ್ಯಕ್ತಗೊಳಿಸಿ ಗಮನ ಸೆಳೆದಿದೆ.