Wednesday, August 10, 2022

Latest Posts

ಚೀನಾಗೆ ಅಮೆರಿಕ ಚೀಮಾರಿ| ಅಮೆರಿಕದಲ್ಲೂ ಟಿಕ್ ಟಾಕ್ ಬ್ಯಾನ್ ಗೆ ಆದೇಶ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್‌ಟಾಕ್‌ನ ಮೂಲ ಕಂಪನಿ ಬೈಟ್‌ಡ್ಯಾನ್ಸ್‌ನೊಂದಿಗಿನ ವ್ಯವಹಾರಗಳನ್ನು ನಿಷೇಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ್ದಾರೆ.

ಗುರುವಾರ ರಾತ್ರಿ, ಅಮೆರಿಕ ಅಧ್ಯಕ್ಷ ಟ್ರಂಪ್ ಟಿಕ್ ಟಾಕ್ ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಟಿಕ್ ಟಾಕ್ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಮುಂದಿನ 45 ದಿನಗಳಲ್ಲಿ ಈ ಆದೇಶ ಜಾರಿಗೆ ಬರಲಿದ್ದು,  ಬೈಟ್‌ಡ್ಯಾನ್ಸ್‌ನೊಂದಿಗೆ ಅಮೆರಿಕ ಎಲ್ಲಾ ವಹಿವಾಟುಗಳನ್ನು ನಿಷೇಧಿಸಲು ತೀರ್ಮಾನಿಸಿದೆ.

ಚೀನಾ ಮೂಲದ ಟೆಕ್ ದೈತ್ಯ ಟೆನ್ಸೆಂಟ್ ಒಡೆತನದ WeChat ಅನ್ನು ನಿಷೇಧಿಸಲು ಇದೇ ರೀತಿಯ ಕ್ರಮ ತೆಗೆದುಕೊಳ್ಳುವ ಅನುಸರಣಾ ಕಾರ್ಯನಿರ್ವಾಹಕ ಆದೇಶವನ್ನು ಹೊರಡಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss