ಚೀನಾಗೆ ಭಾರತದ ಭರ್ಜರಿ ಶಾಕ್: ಟಿಕ್ ಟಾಕ್, ಶೇರ್ ಇಟ್ ಸಹಿತ 59 ಮೊಬೈಲ್ App‌ಗಳಿಗೆ ಬೀಗ!

0
1518

ನವದೆಹಲಿ: ಭಾರತೀಯ ಯೋಧರ ಹತ್ಯೆ ನಡೆಸಿದ ಬಳಿಕ ಚೀನಾಗೆ ಒಂದರ ಮೇಲೊಂದು ಆಘಾತ ನೀಡುತ್ತಿರುವ ಕೇಂದ್ರ ಸರಕಾರ, ಈಗ ಚೀನಾ ಮೂಲದ ಬರೋಬ್ಬರಿ 59 ಮೊಬೈಲ್ Appಗಳನ್ನು ಒಂದೇ ಏಟಿಗೆ ನಿಷೇಧಿಸುವ ಮೂಲಕ ಭರ್ಜರಿ ಏಟು ನೀಡಿದೆ.
ಟಿಕ್ ಟಾಕ್, ಶೇರ್ ಇಟ್, ಹೆಲೋ ಸಹಿತ 59 Appಗಳಿಗೆ ಕೇಂದ್ರ ಸರಕಾರ ನಿಷೇಧ ಹೇರಿದ್ದು, ಇನ್ನು ಇವುಗಳು ಮೊಬೈಲ್‌ನಲ್ಲಿ ಕೆಲಸ ಮಾಡುವುದಿಲ್ಲ ಎಂದು ಪ್ರಸಾರ ಮತ್ತು ಮಾಹಿತಿ ತಂತ್ರಜ್ನಾನ ಇಲಾಖೆ ಹೇಳಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿಷೇಧಕ್ಕೊಳ್ಳಗಾದ ಪ್ರಮುಖ ಚೈನೀಸ್ Appಗಳ ಪಟ್ಟಿ…

ಟಿಕ್ ಟಾಕ್, ಶೇರ್ ಇಟ್, ಎಂ.ಐ. ಕಮ್ಯುನಿಟಿ, ಯುಸಿ ಬ್ರೌಸರ್, ಬೈಡು ಮ್ಯಾಪ್, ಕ್ಲ್ಯಾಷ್ ಆಫ್ ಕಿಂಗ್ಸ್, ಕ್ಲಬ್ ಫ್ಯಾಕ್ಟರಿ, ಡಿಯು ಬ್ಯಾಟರಿ ಸೇವರ್, ಹೆಲೋ, ಲೈಕೀ, ಯೂ ಕ್ಯಾನ್ ಮೇಕಪ್, ವೈರಸ್ ಕ್ಲೀನರ್

LEAVE A REPLY

Please enter your comment!
Please enter your name here