Saturday, June 25, 2022

Latest Posts

ಚೀನಾದಲ್ಲಿ ಕೊರೋನಾಕ್ಕೆ 425 ಮಂದಿ ಬಲಿ; ಕೇರಳದಲ್ಲಿ ರಾಜ್ಯ ವಿಪತ್ತು ಘೋಷಣೆ

ಹೊಸದಿಲ್ಲಿ: ಚೀನಾದಲ್ಲಿ ಕೊರೋನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಲ್ಲಿಯವರೆಗೂ 425 ಮಂದಿ ಬಲಿಯಾಗಿದ್ದಾರೆ. ಇದುವರೆಗೂ 20,438 ಸೋಕು ತಗಲಿರುವ ಪ್ರಕರಣಗಳು ಪತ್ತೆಯಾಗಿದೆ.

ಭಾರತದಲ್ಲಿ ಕೊರೋನಾ ವೈರಸ್ ಹರಡುವ ಭೀತಿ ಹೆಚ್ಚಾಗಿದ್ದು, ದೇಶದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಇದುವರೆಗೂ ಕೊರೋನಾ ವೈರಸ್ ನ ಮೂರು ಪ್ರಕರಣಗಳು ಪತ್ತೆಯಾಗಿದ್ದು, ಚೀನಾದಿಂದ ಕೇರಳಕ್ಕೆ ಆಗಮಿಸಿರುವ 2239 ಮಂದಿಯನ್ನು ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ ಗಳಲ್ಲಿ ಇರಿಸಲಾಗಿದೆ. ಅಲ್ಲದೇ ಕೇರಳದಲ್ಲಿ ರಾಜ್ಯ ವಿಪತ್ತು ಘೋಷಿಸಲಾಗಿದೆ. ಮುಂಜಾಗ್ರತವಾಗಿ ಅಗತ್ಯವಿರುವ ಎಲ್ಲಾ ವೈದ್ಯಕೀಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇರಳ ಆರೋಗ್ಯ ಇಲಾಖೆ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಕೊರೋನಾ ವೈರಸ್ ರಾಜಸ್ಥಾನಕ್ಕೂ ಕಾಲಿಟ್ಟಿದ್ದೂ ಜನರು ಆತಂಕ್ಕಿಡಾಗಿದ್ದಾರೆ. ಚೀನಾದಿಂದ ರಾಜಸ್ಥಾನಕ್ಕೆ ಮರಳಿ ಬಂದಿರುವ ಉತ್ತರಖಂಡ ವಿದ್ಯಾರ್ಥಿಯನ್ನು ಏಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ರಾಜಸ್ಥಾನಕ್ಕೆ ಬರುವ ಶಂಕಿತ ವ್ಯಕ್ತಿಗಳ ರಕ್ತದ ಮಾದರಿಯನ್ನು ಎಸ್ಎಂಎಸ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ 6 ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss