ಹೊಸದಿಗಂತ ಆನ್ಲೈನ್ ಡೆಸ್ಕ್:
ತನ್ನ ಮನೆಯ ‘ಸೃಷ್ಟಿ’ ಈಗ ಹೊಸ ಅವತಾರವೆತ್ತಿರುವುದರಿಂದ ಬೆಚ್ಚಿಬಿದ್ದಿರುವ ಚೀನಾ ಈಗ ಲೂನಾರ್ ನ್ಯೂ ಇಯರ್ನ ರಜಾದಿನಗಳಲ್ಲಿ ನಗರದಿಂದ ಹೊರ ಹೋಗದಂತೆ ಬೀಜಿಂಗ್ ನಾಗರಿಕರಿಗೆ ಕಟ್ಟಪ್ಪಣೆ ವಿಧಿಸಿದೆ.
ಚೀನಾದ ರಾಜಧಾನಿ ಬಿಜೀಂಗ್ನಲ್ಲಿ ಕಳೆದ ವಾರ ಮತ್ತೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಹೊಸ ನಿರ್ಧಾರ ಕೈಗೊಂಡಿದೆ. ಕ್ರೀಡಾಕೂಟ ಆಯೋಜನೆಗೆ ನಿಷೇಧ ಹೇರಲಾಗಿದ್ದು, ಧಾರ್ಮಿಕ ಸ್ಥಳಗಳಲ್ಲಿ ಕೂಡಾ ದೊಡ್ಡ ಪ್ರಮಾಣದಲ್ಲಿ ಜನ ಸೇರದಂತೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಸಿನಿಮಾ ಥಿಯೇಟರ್, ಗ್ರಂಥಾಲಯ, ವಸ್ತುಸಂಗ್ರಹಾಲಯ ಮೊದಲಾದ ಜನಸಂದಣಿ ಸೇರುವ ಸ್ಥಳಗಳಲ್ಲಿ ಅವುಗಳ ಆಸನ ಸಾಮರ್ಥ್ಯದ ಶೇ. 75 ರಷ್ಟು ಜನ ಮಾತ್ರ ಸೇರಬಹುದು ಎಂದೂ ಸರಕಾರ ನಿರ್ದೇಶನ ನೀಡಿದೆ.
Proud to have from district #Kathua, #JammuAndKashmir, the first women bus driver Pooja Devi. pic.twitter.com/7wTMa272kC
— Dr Jitendra Singh (@DrJitendraSingh) December 25, 2020