ಶಾಂಘಾಯ್: ಇಡೀ ಪ್ರಪಂಚಕ್ಕೆ ಕೊರೋನಾ ಹರಡಿದ ಆರೋಪಕ್ಕೆ ಒಳಗಾದ ಚೀನಾದ ಪ್ರಮುಖ ನಗರಗಳಲ್ಲಿ ರಾತ್ರಿ ವೇಳೆ ಮೋಜು ಮಸ್ತಿ ಶುರುವಾಗಿದೆ !
ಶಾಂಘಾಯ್, ಹಾಕ್ಕಾಂಗ್ ಮತ್ತು ಬೀಜಿಂಗ್ನಲ್ಲಿ ರಾತ್ರಿ ವೇಳೆ ಸಕ್ರಿಯವಾಗುವ ನೈಟ್ಕ್ಲಬ್, ಡಿಸ್ಕೋಥಿಕ್ ಹಾಗೂ ಲೈವ್ಬ್ಯಾಂಡ್ ಕಾರ್ಯಕ್ರಮಗಳು ಭಾನುವಾರದಿಂದಲೇ ಶುರುವಾಗಿವೆ.
ಪ್ರತಿ ಕಡೆಯೂ ವಿಶ್ವ ಆರೋಗ್ಯ ಸಂಸ್ಥೆ ವಿಧಿಸಿರುವ ಮಾರ್ಗಸೂಚಿ ಅನುಸಾರ ನೈಟ್ ಕ್ಲಬ್ಗಳ ಚಟುವಟಿಕೆ ಶುರುವಾಗಿದೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೂ ಮಾಸ್ಕ್ ನೀಡಲಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡುವ ಮೂಲಕವೇ ಇಲ್ಲಿನ ಚಟುವಟಿಕೆಗಳನ್ನು ಮುಂದುವರಿಸಲಾಗುವುದು.
ಆದರೆ ಲಾಕ್ಡೌನ್ಗೂ ಮುನ್ನ ಇದ್ದಂತಹ ವಾತಾವರಣವನ್ನು ಈಗಿಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ಶಾಂಘಾಯ್ ನೈಟ್ ಕ್ಲಬ್ ಮಾಲಿಕರ ಅನಿಸಿಕೆ. ನಿನ್ನೆಯಷ್ಟೆ ನೈಟ್ಕ್ಲಬ್ಬುಗಳಲ್ಲಿ ಕೆಲಸ ಮಾಡುವ ಸುಮಾರು 234 ಮಂದಿಗೆ ಕೊರೋನಾ ಪಾಸಿಟೀವ್ ಬಂದಿದ್ದು ಅವರೆಲ್ಲರನ್ನೂ ಕ್ವಾರಂಟೈನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.