ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಬಿಕ್ಕಟ್ಟಿನ ನಡುವೆ ಚೀನಾದಲ್ಲಿ ಸಿಲುಕಿದ್ದ ಭಾರತೀಯ ನಾವಿಕರು ಶೀಘ್ರವೇ ಭಾರತಕ್ಕೆ ಮರಳಲಿದ್ದು, ಅವರನ್ನು ಕರೆತರಲು ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ. ನಾವಿಕರನ್ನು ಒಳಗೊಂಡ ಒಂದು ಹಡಗು ಜನವರಿ 14 ರಂದು ಭಾರತ ತಲುಪಲಿದೆ ಎಂದು ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ಸಚಿವ ಮನ್ಸುಖ್ ಮಾಂಡವಿಯ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಬಲ ನಾಯಕತ್ವದ ಪರಿಣಾಮ ನಾವಿಕರು ಸ್ವದೇಶಕ್ಕೆ ಮರಳಲು ಸಹಾಯಕವಾಯಿತು ಎಂದು ಅವರು ಹೇಳಿದ್ದಾರೆ. ನಾವಿಕರನ್ನು ಕರೆತರುವಲ್ಲಿ ಗ್ರೇಟ್ ಈಸ್ಟರನ್ ಶಿಪ್ಪಿಂಗ್ ಕಂಪನಿಯ ಮಾನವೀಯ ನೆರವನ್ನು ಸಚಿವರು ಶ್ಲಾಘಿಸಿದ್ದಾರೆ.