ನವದೆಹಲಿ: ಚೀನಾದ ಮೊಬೈಲ್ ಅಪ್ಲಿಕೇಶನ್ಗಳಿಗೆ ನಿಷೇಧ ಹೇರಿದ ಬಳಿಕ, ಈಗ ಭಾರತ ಸರ್ಕಾರವು ಚೀನಾದಿಂದ ಕಲರ್ ಟೆಲಿವಿಷನ್ ಸೆಟ್ಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧಗಳನ್ನು ವಿಧಿಸಿದೆ.
ಚೀನಾದಿಂದ ಕಲರ್ ಟಿವಿ ಆಮದಾಗುವುದನ್ನು ತಡೆದು ಸ್ಥಳೀಯವಾಗಿ ಕಲರ್ ಟಿವಿ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವುದೇ ಕೇಂದ್ರ ಸರ್ಕಾರದ ಈ ನಡೆಯ ಉದ್ದೇಶ. ಈ ಸಂಬಂಧ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್(ಡಿಜಿಎಫ್ಟಿ) ಅಧಿಸೂಚನೆ ಪ್ರಕಟಿಸಿದೆ. ಬಣ್ಣ ಟೆಲಿವಿಷನ್ ಸೆಟ್ಗಳ ಆಮದು ನೀತಿಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಡಿಜಿಎಫ್ಟಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರರ್ಥ ಕೆಲವು ವಿಭಾಗಗಳಲ್ಲಿ ಟಿವಿಗಳನ್ನು ಆಮದು ಮಾಡಿಕೊಳ್ಳಲು ಈಗ ಸರ್ಕಾರದಿಂದ ಪರವಾನಗಿ ಬೇಕಾಗುತ್ತದೆ.
ಈ ಅಧಿಸೂಚನೆಯಲ್ಲಿ ‘ನಿರ್ಬಂಧಿತ’ ಸರಕುಗಳನ್ನು ಆಮದು ಮಾಡಿಕೊಳ್ಳಲು ಅರ್ಜಿ ಸಲ್ಲಿಸುವ ಆಮದುದಾರರಿಗೆ ನಿಜವಾದ ಬಳಕೆದಾರ ಪರಿಸ್ಥಿತಿಗಳು ಅನ್ವಯವಾಗುವುದಿಲ್ಲ. ಪರವಾನಗಿ ನೀಡುವ ವಿಧಾನವನ್ನು ಡಿಜಿಎಫ್ಟಿ ಪ್ರತ್ಯೇಕವಾಗಿ ನೀಡಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಈಗಾಗಲೇ ಭಾರತೀಯ ರೈಲ್ವೆ ಮತ್ತು ರಸ್ತೆ ಸಾರಿಗೆ ಇಲಾಖೆಗಳು ಚೀನಾ ಕಂಪನಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಿವೆ.