Thursday, July 7, 2022

Latest Posts

ಚೀನಾದ ವಿರುದ್ಧ ತಿರುಗಿಬಿದ್ದ ಮಿತ್ರ ರಾಷ್ಟ್ರ: ಪಾಕಿಸ್ತಾನದಲ್ಲೂ ಟಿಕ್ ಟಾಕ್ ಬ್ಯಾನ್

ಇಸ್ಲಾಮಾಬಾದ್​: ಚೀನಾದ ವಿರುದ್ಧ ತನ್ನ ಮಿತ್ರನೇ ತಿರುಗಿ ಬಿದ್ದಿದ್ದು, ಪಾಕಿಸ್ತಾನದಲ್ಲಿ ಚೀನಾದ ಜನಪ್ರಿಯ ಆಪ್ಲಿಕೇಷನ್ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಆದೇಶ ಹೊರಹಾಕಿದೆ.
ಈಗಾಗಲೇ ಜೂನ್​ ತಿಂಗಳಲ್ಲಿ ಟಿಕ್​ಟಾಕ್​ ಸೇರಿದಂತೆ ಇತರ 58 ಚೀನಿ ಆ್ಯಪ್​ಗಳ ಮೇಲೆ ಭಾರತ ನಿಷೇಧಿಸಿದೆ. ಇದರ ಬೆನ್ನಲ್ಲೇ ಅಮೇರಿಕ ಕೂಡ ಟಿಕ್​ ಟಾಕ್​ ಬ್ಯಾನ್ ಮಾಡಿದೆ .ಇದೀಗ ಪಾಕ್ ಕೂಡ ನಿರ್ಬಂಧ ಏರಿದೆ .
ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ ಇದರ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣದಿಂದಲೇ ಚೀನಾದ ಅಪ್ಲಿಕೇಶನ್​ ಟಿಕ್​ಟಾಕ್​ ಅನ್ನು ನಿರ್ಬಂಧಿಸಿದ್ದಾಗಿ ಹೇಳಿದೆ ಎಂದು ಅಲ್ಲಿನ ಸುದ್ದಿವಾಹಿನಿ ವರದಿ ಮಾಡಿದೆ. ಆನ್​ಲೈನ್​ ವಿಷಯದ ನಿಯಮ ಅನುಸರಿಸಲು ಕಂಪನಿ ವಿಫಲವಾದ ಕಾರಣ ಹಾಗೂ ಕೆಲವೊಂದು ಕಾನೂನು ಬಾಹಿರವಾಗಿ ವಿಡಿಯೋ ಇದರಲ್ಲಿ ವೈರಲ್​ ಆಗುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅದು ಹೇಳಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss