ಬೀಜಿಂಗ್:ಲಡಾಖ್ನ ಗ್ವಾಲನ್ ಕಣಿವೆ ಪ್ರದೇಶದಲ್ಲಿ ಮಂಗಳವಾರ ಚೀನೀ ಸೈನಿಕರ ಆಕ್ರಮಣ ಯತ್ನವನ್ನು ಭಾರತೀಯ ಯೋಧರು ತಡೆದಾಗ ಉಂಟಾದ ಘರ್ಷಣೆಯಲ್ಲಿ ಚೀನಾ ಕಡೆಯಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿರುವುದಾಗಿ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಚೀನಾದ ಆಡಳಿತ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ಚೀನಾ ಕಡೆಯಲ್ಲಿ ಸಾವುನೋವುಗಳು ಸಂಭವಿಸಿದೆ ಎಂದು ಹೇಳಿಕೊಂಡರೂ ನಿರ್ದಿಷ್ಟ ಸಂಖ್ಯೆಯನ್ನು ಉಲ್ಲೇಖಿಸದಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
ಬ್ರಿಟನ್ನ ಎಕ್ಸ್ಪ್ರೆಸ್ ಯುಕೆ ತನ್ನ ವರದಿಯಲ್ಲಿ , ಭಾರತೀಯ ಯೋಧರ ಜೀವ ನಷ್ಟವಾಗಿದ್ದರೂ, ಭಾರತೀಯ ಯೋಧರು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಆಕ್ರಮಣಕೋರರನ್ನು ದಂಡಿಸಿದ್ದಾರೆ.ಚೀನಾದ ಐವರು ಸೈನಿಕರನ್ನು ವಸಿದ್ದಾರೆ…ಎಂದು ಹೇಳಿದೆ. ಅಮೆರಿಕದ ಸೇನಾ ಕರ್ನಲ್ ಲಾರೆನ್ಸ್ ಸೆಲ್ಲಿನ್ ಅವರು ಟ್ವೀಟೊಂದರಲ್ಲಿ ಭಾರತದೊಂದಿಗೆ ಪರಿಸ್ಥಿತಿಯನ್ನು ಹದಗೆಡಿಸಿಕೊಳ್ಳಬೇಡಿ ಎಂದು ಚೀನಾಕ್ಕೆ ಹೇಳಿರುವುದನ್ನೂ ಪತ್ರಿಕೆ ಉಲ್ಲೇಖಿಸಿದೆ.
ಚೀನಾ ಭಾರತೀಯ ಯೋಧರ ಮೇಲೆ ಆರೋಪ ಮಾಡಿದ ಹೊರತಾಗಿಯೂ ಗ್ವಾಲನ್ ಕಣಿವೆಯಲ್ಲಿ ಚೀನೀ ಸೈನಿಕರ ಆಕ್ರಮಣಕಾರಿ ಮನೋಭಾವವೇ ಭಾರತೀಯ ಯೋಧರನ್ನು ಪ್ರತಿ ಹೋರಾಟಕ್ಕೆ ಪ್ರಚೋದಿಸಿತ್ತು ಎಂಬುದನ್ನು ರಕ್ಷಣಾ ತಜ್ಞರು ಒತ್ತಿ ಹೇಳುತ್ತಾರೆ.ಗ್ಲೋಬಲ್ ಟೈಮ್ಸ್ನ ಎಡಿಟರ್ ಇನ್ ಚೀಫ್ ಹು ಶಿಜಿನ್ , ಚೀನಾದ ಕಡೆಯಲ್ಲಿ ಅನೇಕ ಸಾವು ನೋವು ಉಂಟಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಭಾರತಕ್ಕೆ ಯುದ್ಧದ ಬೆದರಿಕೆಯನ್ನೂ ಒಡ್ಡಿದ್ದಾರೆ.