Wednesday, August 17, 2022

Latest Posts

ಚೀನಾ ಕೆಂಡವನ್ನು ಮುಟ್ಟಿದೆ, ಈಗ ಹೆದರಬೇಕಾಗಿದ್ದು ಚೀನಾವೇ ಹೊರತು ಭಾರತವಲ್ಲ: ಸೂಲಿಬೆಲೆ

ಹಾವೇರಿ: ಸ್ವದೇಶಿ ಅಭಿಯಾನ ಪ್ರಾರಂಭ ಆಗಿರುವುದರಿಂದಲೇ ಭಾರತ ಚೀನಾ ಯುದ್ಧ ಆಗುವುದಿಲ್ಲ ಎನ್ನುವುದು ಖಾತರಿಯಾಗಿದೆ. ಪ್ರಸಕ್ತ ಭರತ ಚೀನಾವನ್ನು ಕಣ್ಣಿಟ್ಟಿ ನೋಡಲಾರಂಭಿಸಿದ ಕೂಡಲೇ ಏಕಾಏಕಿ ಚೀನಾ ಶಾಂತವಾಗಿರುವದನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕ ಚರ್ಕವರ್ತಿ ಸೂಲಿಬೆಲೆ ಹೇಳಿದರು.
ಶುಕ್ರವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಕೆಂಡವನ್ನು ಮುಟ್ಟಿದೆ ಈಗ ಹೇದರಬೇಕಾಗಿದ್ದು ಚೀನಾನೇ ಹೊರತು ಭಾರತವಲ್ಲ. ಚೀನಾ ಟ್ರ್ಯಾಕ್ ರಿಕಾರ್ಡ್ ಅಷ್ಟೊಂದು ಸರಿಯಾಗಿಲ್ಲ. ಯಾವ ದೇಶದೊಂದಿಗೆ ಸೌಹಾರ್ಧಯುತ ಸಂಬಂಧವನ್ನು ಇಟ್ಟೊಕೊಂಡಿಲ್ಲ. ರಾಜರ ಕಾಲದಿಂದಲೂ ಆ ದೇಶದ ಅಕ್ಕ ಪಕ್ಕದ ಭೂಮಿಯನ್ನು ಕಬಳಿಸುತ್ತಲೇ ಬಂದಿದ್ದಾರೆ. ಖಂಡಿತವಾಗಿಯೂ ಸುಮ್ಮನಿರುವ ರಾಷ್ಟ್ರವಲ್ಲ ಎಂದು ತಿಳಿಸಿದರು.
ಚೀನಾದ ಅಧಿಕೃತ ಪತ್ರಿಕೆ ಗ್ಲೋಬಲ್ ಟೈಮ್ಸ್ ಚೀನಾದ ಸೈನಿಕರು ಅಲ್ಲಿ ಅಭ್ಯಾಸ ನಡೆಸಿದರು ಇಲ್ಲಿ ಅಭ್ಯಾಸ ನಡೆಸಿದರು ಎನ್ನುವ ದಿನಕ್ಕೊಂದು ಸುದ್ದಿಯನ್ನು ಪ್ರಕಟಿಸುತ್ತಿರುವುದನ್ನು ಗಮನಿಸಿದರೆ ಚೀನಾದ ಪರಿಸ್ಥಿತಿ ಹೇಗಾಗಿದೆ ಎಂದು ಅರ್ಥ ಮಾಡಿಕೊಳ್ಳಬಹುದು ಎಂದರು.
ಭಾರತೀಯ ಹಿಂದಿ ಸಿನೇಮಾಗಳನ್ನು ಚೀನಾದಲ್ಲಿಯೂ ವೀಕ್ಷಿಸಿವ ಮೂಲಕ ಆ ದೇಶಕ್ಕೆ ಅಪಾರ ಪ್ರಮಾಣದ ಹಣವನ್ನು ನೀಡಲಾಗುತ್ತಿದೆ ಎಂದು ಚೀನಾ ಮೊಟ್ಟ ಮೊದಲ ಬಾರಿಗೆ ಸಮರ್ಥನೆಯನ್ನು ಮಾಡಿಕೊಳ್ಳುತ್ತಿರುಗುವದನ್ನು ಗಮನಿಸಿದರೆ ಚೀನಾದ ಸ್ಥಿತಿ ಎಲ್ಲಿಗೆ ಬಂದು ತಲುಪಿದೆ ಎಂದು ತಿಳಿದಿಕೊಳ್ಳುಬಹುದಾಗಿದೆ ಎಂದು ಹೇಳಿದರು.
ಶೂನ್ಯ ತಂತ್ರಜ್ಞಾನದಿಂದ ತಯಾರಾದ ಚಿಕ್ಕ ಚಿಕ್ಕ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಅವಶ್ಯಕವಾಗಿಲ್ಲ, ಬೃಹತ್ ಯಂತ್ರಗಳನ್ನು ತಯಾರಿಸುವುದು ಸ್ವಲ್ಪ ಕಷ್ಟವಾಗಬಹುದು ಆದರೆ ಬೇರೆಯವರನ್ನು ಒಂದು ಬಾರಿ ತಡೆದು ನಿಲ್ಲಿಸಿದರೆ ನಾವು ಮುಂದೆ ಸಾಗುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ಭಾರತದಲ್ಲಿ ಸ್ವದೇಶಿ ಅಭಿಯಾನ ಪ್ರಾರಂಭಿಸಿದ್ದರಿಂದ ನಮ್ಮ ದೇಶದಲ್ಲಿನೇ ವಸ್ತುಗಳನ್ನು ತಯಾರು ಮಾಡುವವರೆಗೂ ಕೆಲ ವಸ್ತುಗಳ ಬೆಲೆ ಏರಿಕೆ ಆಗಬಹುದು ಅಲ್ಲಿಯವರೆಗೂ ದೇಶದ ಸೈನಿಕರು ಕಷ್ಟಪಡುವಂತೆ ನಾವೆಲ್ಲ ಬೆಲೆ ಏರಿಕೆಯನ್ನು ಸಹಿಸಿಕೊಳ್ಳುವದಕ್ಕೆ ಸಿದ್ಧರಾಗಬೇಕಾಗಿದೆ ಎಂದು ಜನತೆಗೆ ಕರೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!