Thursday, July 7, 2022

Latest Posts

ಚೀನಾ ಕೊರೋನಾ: ಸತ್ತವರು ಎಷ್ಟು ಮಂದಿ? ಸೋಂಕಿತರೆಷ್ಟು ? ಹುತ್ತ ಬಡಿಯುವವರು ಯಾರು ?

ಪಿ. ರಾಜೇಂದ್ರ

ಕಳೆದ ನಾಲ್ಕು ತಿಂಗಳಿಂದ ಕೊರೋನಾ ಉಲ್ಬಣಿಸಿದ್ದರೂ, ಇದರ ಬಗ್ಗೆ ಕಿಂಚತ್ ಸುಳಿವು ನೀಡದ
ಚೀನಾ ವೈಖರಿಗೆ ವಿಶ್ವಸಂಸ್ಥೆ ಕೂಡಾ ತೀವ್ರ ಅಸಮಾದಾನಗೊಂಡಿದೆ

ಕೊರೋನಾ ಸೋಂಕಿನಿಂದ ಚೀನಾದಲ್ಲಿ ಇದುವರೆಗೆ ಸತ್ತವರು ಎಷ್ಟು ಮಂದಿ? ಸೋಂಕಿತರೆಷ್ಟು ?
ಇದು ಪ್ರಪಂಚಕ್ಕೇ ಇಂದು ಇದೊಂದು ಯಕ್ಷಪ್ರಶ್ನೆ ! ಏಕೆಂದರೆ ಕಳೆದ ಮೂರು, ನಾಲ್ಕು ತಿಂಗಳಿಂದ ಚೀನಾದಲ್ಲಿ ಕೊರೋನಾ ರುದ್ರತಾಂಡವವಾಡಿ ಲಕ್ಷಾಂತರ ಮಂದಿಯನ್ನು ಬಲಿತೆಗೆದುಕೊಂಡಿದ್ದರೂ ಕಟುವಾಸ್ತವನ್ನು ಮಾತ್ರ ಈ ದೇಶ ಹೊರಪ್ರಪಂಚಕ್ಕೆ ಹೊರ ಹಾಕಿಲ್ಲ!
ಸಿಐಎ ಹಿಡಿತಕ್ಕೂ ಸಿಗದ ಮಾಹಿತಿ
ಚೀನಾದಲ್ಲಿದ್ದ ಅಮೆರಿಕಾದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಈ ದಿಶೆಯಲ್ಲಿ ಹೇಳಿರುವ ಮಾತುಗಳು ಗಮನಾರ್ಹ. ಕೊರೋನಾ ವಿಷಯದಲ್ಲಿ ಚೀನಾ ಸರ್ಕಾರ ನಿಜವನ್ನು ಮುಚ್ಚಿಟ್ಟಿದೆ! ಈ ವಿಷಯದಲ್ಲಿ ಚೀನಾ ಸರ್ಕಾರದ ನಡವಳಿಕೆ ಮತ್ತು ಹೇಳಿಕೆಗಳು ಸಂದೇಹಾಸ್ಪದವಲ್ಲದೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಹ್ಯಾಲಿ ವಾರ್ತಾಸಂಸ್ಥೆಯೊಂದಕ್ಕೆ ನೀಡಿರುವ ಪ್ರತಿಕ್ರಿಯೆಯಲ್ಲಿ ವ್ಯಾಖ್ಯಾನಿಸಿದ್ದಾರೆ. ವುಹಾನ್ ನಗರದಿಂದಲೇ ಕೊರೋನಾ ಸೋಂಕಿನ ಪಯಣ ಶುರುವಾಗಿದೆ ಎಂದು ಅಮೆರಿಕ ಆರೋಪಿಸಿದರೆ, ಇದೊಂದು ಅಮೆರಿಕ ಅಪಪ್ರಚಾರ ಎಂದು ಚೀನಾ ತಿಪ್ಪೇ ಸಾರಿಸುತ್ತಿದೆ. ಇದೇ ವೇಳೆ ಯೂರೋಪ್, ಆಸ್ಟ್ರೇಲಿಯಾ ಮತ್ತು ಏಷಿಯಾ ಖಂಡಗಳ ವಿವಿಧ ದೇಶಗಳೂ ಚೀನಾದಲ್ಲಿ ಇದುವರೆಗೆ ಕೊರೋನಾ ಸೋಂಕನಿಂದ ಸತ್ತವರೆಷ್ಟು ಎಂಬುದನ್ನು ಖಚಿತವಾಗಿ ತಿಳಿಯಲು ಸಾಧ್ಯವಾಗಿಲ್ಲ. ವಿಶ್ವದಲ್ಲಿಯೇ ಅತಿ ಚುರುಕು ಮತ್ತು ತೀಕ್ಷ್ಣಗತಿಯ ಇಂಟಿಲೆಜೆನ್ಸ್ ಹೊಂದಿರುವ ಅಮೆರಿಕದ ಸಿಐಎ ಅಂದಾಜಿಗೂ ಚೀನಾ ಚಿದಂಬರ ರಹಸ್ಯದ ಮಾಹಿತಿ ದೊರೆಯುತ್ತಿಲ್ಲ !
ವುಹಾನ್‌ನಲ್ಲೇ 50 ಸಾವಿರ ಮಂದಿ ಸಾವು ?
ವುಹಾನ್ ನಗರದಲ್ಲಿಯೇ ಇದುವರೆಗೆ 50 ಸಾವಿರ ಮಂದಿ ಸತ್ತಿದ್ದಾರೆಂಬುದು ಅಮೆರಿಕ ನಡೆಸಿರುವ ಸಮೀಕ್ಷೆಯೊಂದರ ಮಾಹಿತಿ. ಆದರೆ ಈ ಮಾಹಿತಿಯನ್ನು ಚೀನಾ ಒಪ್ಪಿಲ್ಲ. ಕಳೆದ ಡಿಸೆಂಬರ್‌ನಿಂದಲೂ ಕೊರೋನಾ ಇಲ್ಲಿ ವ್ಯಾಪಕವಾಗಿ ಹರಡಿದ್ದರೂ, ಸೋಂಕಿನ ಮೂಲಸ್ವರೂಪದ ಬಗ್ಗೆಯಾಗಲೀ, ನಿವಾರಣೆ ಕುರಿತಾಗಲೀ , ಚೀನಾ ವಿಶ್ವ ಆರೋಗ್ಯ ಸಂಸ್ಥೆ ಜೊತೆ ಚರ್ಚಿಸಿಲ್ಲ ಹಾಗೂ ಸರಿಯಾದ ಮಾಹಿತಿಯನ್ನೂ ನೀಡಿಲ್ಲ. ಇದು ವಿಶ್ವಸಂಸ್ಥೆಗೂ ತೀವ್ರ ಅಸಮಾಧಾನ ತಂದಿದೆ. ಇಂದು ಪ್ರಪಂಚದ ಸುಮಾರು 204 ದೇಶಗಳಲ್ಲಿ ಕೊರೋನಾ ಮಿಂಚಿನ ವೇಗದಲ್ಲಿ ಹರಡುತಿದ್ದರೂ ಚೀನಾ ಮಾತ್ರ ಏಕಮುಖವಾಗಿ ಆಲೋಚಿಸುತ್ತಿರುವುದು ಪ್ರಪಂಚದ ಎಲ್ಲ ದೇಶಗಳನ್ನು ಚಿಂತೆಗೀಡುಮಾಡಿದೆ.
ಅಮೆರಿಕದ ಜಾನ್‌ಹಾಪ್‌ಕಿನ್ಸ್ ವಿವಿ ಸಂಶೋಧನೆ ಪ್ರಕಾರ, ಇಡೀ ವಿಶ್ವ ದಲ್ಲಿಂದು ಕೊರೋನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ ದಾಟಿದೆ. ಅಮೆರಿಕದಲ್ಲಿ 2.36 ಲಕ್ಷ ಮಂದಿಗೆ ಸೋಂಕು ತಗುಲಿದ್ದು ಇದುವರೆಗೆ ಸುಮಾರು ಐದು ಸಾವಿರ ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ 80,589 ಮಂದಿಗೆ ಸೋಂಕು ತಗುಲಿದ್ದು 3,318 ಮಂದಿ ಮೃತಪಟ್ಟಿದ್ದಾರೆಂದು ಇಲ್ಲಿನ ಸರ್ಕಾರ ಘೋಷಿಸಿದರೂ ಇದನ್ನು ಯಾರೂ ನಂಬಲು ತಯಾರಿಲ್ಲ.
ಬ್ಲರ್ಬ್ :

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss