ಹೊಸದಿಲ್ಲಿ: ಆನ್ಲೈನ್ ಚೀನೀ ಬೆಟ್ಟಿಂಗ್ ಅಪ್ಲಿಕೇಶನ್ಗಳ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಕಂಪನಿಗಳಿಗೆ ಸೇರಿದ 15 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು, ಒಟ್ಟು 46.96 ಕೋಟಿ ರೂ. ಹೊಂದಿರುವ 4 HSBC ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿ ತಿಳಿದೆ.
ಜಾರಿ ನಿರ್ದೇಶನಾಲಯವು ದೆಹಲಿ, ಗುರುಗ್ರಾಮ್, ಮುಂಬೈ ಮತ್ತು ಪುಣೆಯಾದ್ಯಂತ ಹರಡಿರುವ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ. ದಾಳಿಯ ವೇಳೆ 17 ಹಾರ್ಡ್ ಡಿಸ್ಕ್ ಗಳು, 5 ಲ್ಯಾಪ್ಟಾಪ್ ಗಳು, ಫೋನ್ ಗಳು ಮತ್ತು ನಿರ್ಣಾಯಕ ದೋಷಾರೋಪಣೆ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ.
ಎಚ್ಎಸ್ಬಿಸಿ ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಕೆಲವು ಸ್ಥಳೀಯರನ್ನು ನೇಮಕ ಮಾಡಿಕೊಳ್ಳಲಾಯಿತು ಮತ್ತು ಆನ್ಲೈನ್ ವ್ಯಾಲೆಟ್ಗಳಾದ ಪೇಟಿಎಂ, ಕ್ಯಾಶ್ಫ್ರೀ, ರೇಜರ್ಪೇ, ಇತ್ಯಾದಿಗಳೊಂದಿಗೆ ವ್ಯಾಪಾರ ಖಾತೆಗಳನ್ನು ತೆರೆಯಲು ಬಳಸಲಾಗುತ್ತಿತ್ತು ಎಂದು ಇಡಿ ಹೇಳಿದೆ.