ನವದೆಹಲಿ: ಚೀನಾ ವಿರುದ್ಫ ಈಡೀ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದೆ.ಇಂತಹ ಸಮಯದಲ್ಲಿ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಚೀನಾ ಮೂಲದ ಟ್ವೀಟ್ ಒಂದನ್ನು ಲೈಕ್ ಮಾಡಿದ್ದಾರೆ. ಈಗ ಭಾರಿ ವಿವಾದಕ್ಕೊಳಗಾಗಿದ್ದಾರೆ.
ಗಲ್ವಾನ್ ವ್ಯಾಲಿಯಲ್ಲಿ ಚೀನಾ ಸೇನೆಯಲ್ಲಿ ಯಾರಿಗೂ ಸಾವು-ನೋವುಗಳಾಗಿಲ್ಲ ಎಂಬ ಚೀನಾ ಮೂಲದ ಟ್ವಿಟರ್ ಖಾತೆಯಲ್ಲಿ ಪ್ರಕಟವಾದ ಟ್ವೀಟ್ ಒಂದನ್ನು ತರೂರ್ ಲೈಕ್ ಮಾಡಿದ್ದರು.ಇದು ವಿವಾದವಾಗುತ್ತಿದ್ದಂತೇ ಟ್ವೀಟ್ ಡಿಲೀಟ್ ಆಗಿದೆ. ಆದರೆ ಅಷ್ಟರಲ್ಲಾಗಲೇ ಇದು ಎಲ್ಲರ ಗಮನ ಸೆಳೆದಿದ್ದು ಭಾರೀ ಟೀಕೆಗೆ ಗುರಿಯಾಗಿದೆ.