ಹೊಸದಿಗಂತ ಆನ್ ಲೈನ್ ಡೆಸ್ಕ್:
ಈ ಬಾರಿಯ ಗೌರಿ ಗಣೇಶ ಮೂರ್ತಿಗಳು ಹಾಗೂ ದೀಪಾವಳಿ ಹಣತೆಗಳನ್ನು ಚೀನಾದಿಂದ ಆಮದು ಮಾಡಿಕೊಂಡಿಲ್ಲ. ಈ ಎಲ್ಲಾ ವಸ್ತುಗಳನ್ನು ಭಾರತೀಯ ಕಂಬಾರರು ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದತ್ಯನಾಥ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಕನಸನ್ನು ನನಸು ಮಾಡಲು ನಾವೆಲ್ಲರೂ ಶ್ರಮಿಸಬೇಕು. ಕೊರೋನಾ ಸೋಂಕು ವಿಶ್ವದಾದ್ಯಂತ ರುವುದರಿಂದ ವರ್ಷ ನಾವು ಯಾವುದೇ ಮೂರ್ತಿಗಳನ್ನು ಚೀನಾದಿಂದ ತರಿಸಿಕೊಂಡಿಲ್ಲ. ಎಲ್ಲವೂ ಸ್ವದೇಶಿ ಉತ್ಪನ್ನಗಳಾಗಿದ್ದು, ಯಾರಿಗೂ ಕೊರತೆಯಾಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.