ಬಂಟ್ವಾಳ: ಚೀನಾ ಮತ್ತು ಭಾರತದ ಮಧ್ಯ ನಡೆದಂತಹ ಯುದ್ಧದಲ್ಲಿ ಪ್ರಾಣತೆತ್ತ ನಮ್ಮ ದೇಶದ ವೀರ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣಾ ಕಾರ್ಯಕ್ರಮವು ಕಲ್ಲಡ್ಕ ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಭೆಯನ್ನುದ್ದೆಶಿಸಿ ಮಾತನಾಡಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ವಿಟ್ಲ ಪ್ರಖಂಡ ಮತ್ತು ಶ್ರೀ ರಾಮ ಮಂದಿರ ಕಲ್ಲಡ್ಕ ಇದರ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.ವಿಹಿಂಪ ಹಾಗೂ ಬಜರಂಗದಳದ ಪ್ರಮುಖರು ಹಾಜರಿದ್ದರು.