ಚೀನೀ ದಾಳವಾದ ಒಲಿ ವಿರುದ್ಧ ನೇಪಾಳ ಆಳುವ ಪಕ್ಷ ಸಭೆಗೇ ಗೈರು!

0
214

ಕಾಠ್ಮಂಡು: ತನ್ನ ಅಕಾರ ಉಳಿಸಿಕೊಳ್ಳುವುದಕ್ಕಾಗಿ ಚೀನಾದ ದಾಳವಾಗಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರ ವಿರುದ್ಧ ಈಗ ನೇಪಾಳದ ಆಡಳಿತ ಪಕ್ಷವೇ ತಿರುಗಿಬಿದ್ದಿದೆ. ಹೇಗಾದರೂ ಅಧಿಕಾರ ಉಳಿಸಿಕೊಳ್ಳಬೇಕೆಂದು ತನ್ನ ಭಾರತ ವಿರೋ ನಿಲುವುಗಳನ್ನು ತೀವ್ರಗೊಳಿಸಿರುವ ಒಲಿ ಆಡಳಿತ ಪಕ್ಷದ ಸಭೆಗೇ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ. ಆಳುವ ನೇಪಾಳಿ ಕಮ್ಯುನಿಸ್ಟ್ ಪಕ್ಷದ ೪೪ ಸದಸ್ಯರ ಪೈಕಿ ೩೦ಕ್ಕೂ ಹೆಚ್ಚು ಮಂದಿ ಒಲಿಗೆ ತಿರುಗಿ ಬಿದ್ದಿದ್ದಾರೆ.ಆದರೆ ಒಲಿ ಮಾತ್ರ ತನ್ನನ್ನು ಉರುಳಿಸಲು ಭಾರತ ಸಂಚು ಹೂಡಿದೆ ಎಂದು ಪ್ರಲಾಪಿಸಿದ್ದಾರೆ.
ಶುಕ್ರವಾರ ನಡೆದ ನೇಪಾಳಿ ಕಮ್ಯುನಿಸ್ಟ್ ಪಾರ್ಟಿಯ ಸ್ಥಾಯೀ ಸಮಿತಿ ಸಭೆಗೆ ಒಲಿ ಹಾಜರಾಗದೆ ತಪ್ಪಿಸಿಕೊಂಡಿದ್ದು, ಇದೀಗ ಸ್ಥಾಯೀ ಸಮಿತಿಯ ಬಹುತೇಕ ಸದಸ್ಯರು ಒಲಿ ಅವರು ಪ್ರಧಾನಿ ಮತ್ತು ಪಕ್ಷಾಧ್ಯಕ್ಷ ಹುದ್ದೆಗಳೆರಡರ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹಾಳುಗೆಡವಿರುವ ಒಲಿ ವಿರುದ್ಧ ಮಾಜಿ ಪ್ರಧಾನಿ ಪುಷ್ಪ ಕಮಾಲ್ ದಾಹಲ್ “ಪ್ರಚಂಡ “ಅವರು ಧ್ವನಿ ಎತ್ತಿದ್ದು, ಸಮಿತಿಯ ಬಹುತೇಕ ಸದಸ್ಯರು ಪ್ರಚಂಡ ಅವರನ್ನು ಬೆಂಬಲಿಸಿದ್ದಾರೆ.
ಆದರೆ ತನ್ನ ಸರಕಾರವನ್ನು ಉರುಳಿಸಲು ದಿಲ್ಲಿಯಲ್ಲಿ ಸಂಚು ರೂಪಿಸಲಾಗುತ್ತಿದೆ ಎಂದು ಒಲಿ ಆರೋಪಿಸಿದ್ದಾರೆ. ಈ ಬಗ್ಗೆ ಬುದ್ಧಿಜೀವಿಗಳ ಚರ್ಚೆಗಳು, ದಿಲ್ಲಿಯ ಮಾಧ್ಯಮ ವರದಿಗಳು ಮತ್ತು ರಾಯಭಾರ ಕಚೇರಿಯ ಚಟುವಟಿಕೆಗಳನ್ನು ನೋಡಿದಾಗ ಇದು ಗೊತ್ತಾಗುತ್ತದೆ. ನನ್ನನ್ನು ಹೊರಹಾಕಲು ಯತ್ನ ನಡೆಯುತ್ತಿದೆ.ಆದರೆ ಅವರು ಸಫಲರಾಗಲಾರರು ಎಂಬುದಾಗಿ ಕಾಠ್ಮಂಡು ಪೋಸ್ಟ್‌ಗೆ ಅವರು ತಿಳಿಸಿದರು.
ನೇಪಾಳ ಮತ್ತು ಭಾರತದ ಸಂಬಂಧ ಅತ್ಯಂತ ಗಾಢವಾದ ಸಾಂಸ್ಕೃತಿಕ , ಧಾರ್ಮಿಕ, ಪಾರಂಪರಿಕ ಬೇರುಗಳನ್ನು ಹೊಂದಿದ್ದರೂ ಒಲಿಯಂತಹ ಅಕಾರಕಾಂಕ್ಷಿ ನೇಪಾಳಿ ರಾಜಕಾರಣಿಗಳು ಚೀನಾ ಹಸ್ತಕರಾಗಿ ಭಾರತ ವಿರೋ ನಿಲುವು ತಳೆಯುತ್ತಿರುವುದು ನೇಪಾಳಿ ಜನರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

LEAVE A REPLY

Please enter your comment!
Please enter your name here