Tuesday, July 5, 2022

Latest Posts

ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ನೇಣಿಗೆ ಶರಣು

ಹೊಸದಿಗಂತ ವರದಿ, ಧಾರವಾಡ:

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ತಾಲೂಕಿನಲ್ಲಿ ಮಂಗಳವಾರ ನಡೆದಿದೆ.

ತಾಲೂಕಿನ ಗರಗ ಗ್ರಾಮದ ದಾಮೋದರ ಯಲಿಗಾರ(33) ಆತ್ಮಹತ್ಯೆಗೆ ಶರಣಾದ ಅಭ್ಯರ್ಥಿ ಎಂದು ತಿಳಿದು ಬಂದಿದೆ. ಗರಗ ಗ್ರಾಮದ 2 ವಾರ್ಡ್ ಗೆ ದಾಮೋದರ ಸ್ಪರ್ಧಿಸಿದ್ದರು.

ಮಂಗಳವಾರ ಮೊದಲ ಹಂತದ ಮತದಾನ ದಿನ ದಾಮೋದರ ನೇಣಿಗೆ ಬೀಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಮೂಲಗ ಸೋಲಿನ ಭಯಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಗಿ ತಿಳಿಸಿವೆ.

ಆದರೆ, ಇನ್ನೂ ಕೆಲ ಗ್ರಾಮಸ್ಥರು ಚುನಾವಣಾ ಅಖಾಡದಿಂದ ಹಿಂದೆ ಸರಿಯುವಂತೆ ಒತ್ತಡ ಇತ್ತೆಂಬ ಆರೋಪಗಳೂ ಸಹ ಕೇಳಿಬಂದಿವೆ. ಪೋಲಿಸ್ ತನಿಖೆ ಮೂಲಕ ಸತ್ಯಾಸತ್ಯೆ ಹೊರಗೆ ಬರಬೇಕಿದೆ.

ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಯಾವುದೇ ಕಾರಣಕ್ಕೂ ಗರಗ ಗ್ರಾಮದಲ್ಲಿ ಚುನಾವಣೆ ಪ್ರಕ್ರಿಯೆ ನಿಲ್ಲಲ್ಲ. ಪೂರ್ಣಗೊಳ್ಳಲಿದೆ. ಒತ್ತಡ ಇರುವ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಪೊಲೀಸ್ ತನಿಖೆ ಮೂಲಕ ಗೊತ್ತಾಗಲಿದೆ.

ದಾಮೋದರ ಆತ್ಮಹತ್ಯೆಯಿಂದ ಗರಗ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss