ಹೊಸದಿಗಂತ ವರದಿ, ವಿಜಯಪುರ:
ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ರಸ್ತೆ ಪಕ್ಕದ ತಡೆಗೋಡೆಗೆ ಕಾರು ಡಿಕ್ಕಿಯಾದ ಪರಿಣಾಮ ಗ್ರಾಮ ಪಂಚಾಯಿತಿ ಅಭ್ಯರ್ಥಿಯೋರ್ವರಿಗೆ ಗಂಭೀರ ಗಾಯಗಳಾದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾ ಬಳಿ ನಡೆದಿದೆ.
ತಳೇವಾಡ ಗ್ರಾಮದ ಮೂರನೇ ವಾರ್ಡ್ ಅಭ್ಯರ್ಥಿ ಸಿದ್ದು ಬಮರಡ್ಡಿಗೆ ಅಪಘಾತವಾಗಿದ್ದು, ಗಂಭೀರ ಗಾಯಗಳಾಗಿದೆ. ಇನ್ನು ಕಾರಿನ ಚಾಲಕ ಬಾಬು ಬೆಲ್ಲದ ಕೂಡ ಗಾಯಗೊಂಡಿದ್ದಾನೆ.
ಗ್ರಾಮ ಪಂಚಾಯಿತಿ ಪ್ರಚಾರದ ನಿಮಿತ್ತವಾಗಿ ಕಾರಿನಲ್ಲಿ ಹೋಗುವಾಗ ಚಾಲಕನ ಯಡವಟ್ಟನಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಇಬ್ಬರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಕೂಡಗಿ ಎನ್ ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.