ಚೆಕ್‌ಪೋಸ್ಟ್‌ ತಪ್ಪಿಸಿ ಅಡ್ಡದಾರಿ ಹಿಡಿದ ತಮಿಳು-ತೆಲುಗುನಾಡಿಗರು: ರಾಜ್ಯಕ್ಕೆ ಇವರೇ ಕೊರೋನಾ ಪ್ರಸಾರಕರು!!

0
52

ಬೆಂಗಳೂರು: ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಹಾಗೂ ತೆಲಂಗಾಣ ಗಡಿ ಪ್ರದೇಶಗಳಿಂದ ರಾಜ್ಯಕ್ಕೆ ಪ್ರವೇಶಿಸುವುದು ಅತಿ ಸುಲಭ.
ಖಾಕಿ ಪಡೆಯೊಂದೇ ಸಾಕೇ?
ಹೆದ್ದಾರಿಗಳ ಬದಿಯಲ್ಲಿ ಚೆಕ್‌ಪೋಸ್ಟ್‌ಗಳಿದ್ದರೂ ಅದನ್ನು ತಪ್ಪಿಸಿ ಒಳ ಪ್ರವೇಶಿಸುವವರ ಮೇಲೆ ಕಣ್ಣಿಡಲು ಕೇವಲ ಖಾಕಿಪಡೆಯಿಂದ ಸಾಧ್ಯವಿಲ್ಲ. ಅರಣ್ಯ ಇಲಾಖೆ ಕೂಡಾ ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕಾಗುವುದು ಅನಿವಾರ್ಯ. ಇಲ್ಲವಾದಲ್ಲಿ, ಕೊರೋನಾ ಸಮರದಲ್ಲಿ ಗೆಲ್ಲುವುದು ಅತಿ ಕಷ್ಟ. ಮೊದಲಿಗೆ ತಮಿಳುನಾಡು ಗಡಿರೇಖೆಗಳನ್ನು ಗಮನಿಸೋಣ. ರಾಜಧಾನಿ ಬೆಂಗಳೂರಿನಿಂದ ಹೂಸೂರು ಕೇವಲ ೫೦ ಕಿಮಿ ದೂರವಷ್ಟೆ. ಈಗಲೂ ಹೂಸೂರು ಬಳಿಯಿರುವ ಅತ್ತಿಬೆಲೆ ಚೆಕ್‌ಪೋಸ್ಟ್ ನಲ್ಲಿ ನೂರಾರು ಮಂದಿ ತಮಿಳರು ಬೆಂಗಳೂರಿನೊಳಗೆ ಪ್ರವೇಶಿಸಲು ಚಾತಕ ಪಕ್ಷಿಗಳಂತೆ ಕುಳಿತಿದ್ದಾರೆ. ಇದಲ್ಲದೆ ಬೆಂಗಳೂರಿಗೆ ಕೃಷ್ಣಗಿರಿ, ಮೆಟ್ಟೂರು ಹಾಗೂ ಧರ್ಮಪುರಿ ಬಹಳ ದೂರವಿಲ್ಲ. ಈ ಜಿಲ್ಲೆಗಳ ಜನತೆಗೆ ಚಾಮರಾಜನಗರದ ಗುಡ್ಡ, ಕಾಡು ಹಾಗೂ ಅಡ್ಡದಾರಿಗಳು ಚೆನ್ನಾಗಿ ಗೊತ್ತು,. ಇವರಿಗೆ ರಾಜ್ಯದೊಳಗೆ ಪ್ರವೇಶ ಪಡೆಯುವುದು ಕಷ್ಟ ಅಲ್ಲವೇ ಅಲ್ಲ.
ಕಳ್ಳಮಾರ್ಗಗಳು
ಆಂಧ್ರ ಪ್ರದೇಶದ ಮೂರು ಜಿಲ್ಲೆಗಳು ರಾಜಧಾನಿಗೆ ನಿಕಟ ಸಂಪರ್ಕ ಹೊಂದಿದ್ದರೆ ಬಳ್ಳಾರಿ, ರಾಯಚೂರು, ಕಲಬುರಗಿ, ಬೀದರ್ ಆಂಧ್ರವಲ್ಲದೆ ತೆಲಂಗಾಣ ಜೊತೆಯೂ ಸಂಪರ್ಕ ಹೊಂದಿದೆ, ಚಿತ್ತೂರು ಹಾಗೂ ಅನಂತಪುರ ಜಿಲ್ಲೆಯವರಿಗೆ ಬೆಂಗಳೂರು ಪ್ರವೇಶಿಸುವುದು ಕಷ್ಟವಲ್ಲ . ಇವರು ಚೆಕ್‌ಪೋಸ್ಟ್ ಮೂಲಕವೇ ಹಾದು ಬರಬೇಕೆಂದಿಲ್ಲ. ರಾಯಲಪಾಡುವಿನ ಮುದಿಮಡಗು ಅರಣ್ಯದ ಮೂಲಕ ಚಿತ್ತೂರು ಜಿಲ್ಲೆಯವರು ಕೋಲಾರ ಜಿಲ್ಲೆ ಸೇರಿಕೊಂಡರೇ ಯಾರೂ ಅವರನ್ನು ಕಂಡು ಹಿಡಿಯಲೂ ಸಾಧ್ಯವಾಗುವುದಿಲ್ಲ !
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿಗೆ ಹಿಂದೂಪುರದಿಂದ ಜನತೆ ಸುಲಭವಾಗಿ ಒಳಗೆ ಬರಲು ಅಡ್ಡ ದಾರಿಗಳಿವೆ. ಚೇಳೂರು, ಪಾತಪಾಳ್ಯದ ಮೂಲಕ ಹಾಗೂ ಪಾವಗಡಕ್ಕೆ ಮಡಕಶಿರ ಮತ್ತು ಕೊಡುಗೇನಹಳ್ಳಿ ಅ ಮೂಲಕ ರಾಜ್ಯ ಸೇರಲು ಯಾವ ಕಷ್ಟವೂ ಇಲ್ಲ. ಇನ್ನು ಬಳ್ಳಾರಿ, ರಾಯಚೂರು ಜಿಲ್ಲೆಗಳು ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳ ಜೊತೆ ನಿರಂತರ ಸಂಪರ್ಕದಲ್ಲಿರುವಂತಹ ಜಿಲ್ಲೆಗಳು.
ಬೀದರ್‌ನಿಂದ ಕೇವಲ ೬೦ ಕಿಮಿ ದೂರದಲ್ಲಿರುವ ಹೈದರಾಬಾದ್ ಜನತೆ ಇಲ್ಲಿಗೆ ಕೆಲವು ತಾಸುಗಳು ಸಾಕು. ಇನ್ನು ಬೆಳಗಾವಿ ಜಿಲ್ಲೆಯ ಅಥಣಿ, ನಿಪ್ಪಾಣಿ ಮತ್ತು ಖಾನಾಪುg, ಪ್ರತಿನಿತ್ಯವೂ ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡೇ ಜೀವನ ನಡೆಸುತ್ತೆ . ಇನ್ನು ವಿಜಯಪುರ ಜಿಲ್ಲೆಯವರಿಗೆ ಮೀರಜ್, ಸಾಂಗಲಿ, ಸೊಲ್ಲಾಪುರದ ಜೊತೆಯೇ ನಿಕಟ ಸಂಬಂಧ. ಒಟ್ಟಿನಲ್ಲಿ ನಾಡಿನ ಉತ್ತರ ಭಾಗದ ಗಡಿರೇಖೆಗಳಿಗಿಂತ ದಕ್ಷಿಣ ಭಾಗದಲ್ಲಿರುವ ಗಡಿಗಳಿಂದಲೇ ಇಂದು ಆಂಧ್ರ, ತಮಿಳುನಾಡು ಕಡೆಯಿಂದ ಅಧಿಕ ಪ್ರಮಾಣದಲ್ಲಿ ಕೊರೋನಾ ಕಂಟಕವಿದೆ ಎಂಬುದರಲ್ಲಿ ಎರಡು ಮಾತಿಲ್ಲ.

LEAVE A REPLY

Please enter your comment!
Please enter your name here