ಬೆಂಗಳೂರು: ಆಂಧ್ರದ ಶಾಸಕರೊಬ್ಬರ 36 ಮಂದಿ ಸಹಚರರು, ರಾಜ್ಯದ ಗಡಿದಾಟಿ ಆಂಧ್ರ ಪ್ರವೇಶಿಲೆತ್ನಿಸಿದ್ದನ್ನು ಪೊಲೀಸರು ಚೆಕ್ಪೋಸ್ಟ್ನಲ್ಲಿಯೇ ತಡೆದು ವಾಪಸ್ಕಳುಹಿಸಿದ್ದಾರೆ .
ವೈ ಎಸ್ ಆರ್ ಪಕ್ಷಕ್ಕೆ ಸೇರಿದ ಕನಿಗಿರಿ ಕ್ಷೇತ್ರದ ಶಾಸಕರು, ತಮ್ಮ ಸಮಕ್ಷಮದಲ್ಲಿಯೇ 36 ಮಂದಿ ಸಹಚರರನ್ನು ಬೆಂಗಳೂರಿನಿಂದ ತಮ್ಮ ವಾಹನದಲ್ಲಿ ಕರೆದೊಯ್ದು ಮದನಪಲ್ಲಿ (ಚಿತ್ತೂರು ಜಿಲ್ಲೆ) ತಲುಪಲೆತ್ನಿಸಿದರು. ರಾಯಲಪಾಡು ಬಳಿ ಇರುವ ಚೀಕಲಬೈಲು ಚೆಕ್ಪೋಸ್ಟ್ ಬಳಿ ಇದ್ದ ಪೊಲೀಸರು, ಶಾಸಕರು ಮತ್ತವರ ಸಹಚರರನ್ನು ಆಂಧ್ರ ಪ್ರವೇಶಿಸಲು ಸುತರಾಂ ಒಪ್ಪಲಿಲ್ಲ . ಆ ಸಮಯದಲ್ಲಿ ಶಾಸಕರು ಮತ್ತು ಸ್ಥಳದಲ್ಲಿದ್ದ ಪೊಲೀಸರ ನಡುವೆ ಮಾತಿನ ಚಕಮಕಿಯಾಗಿದೆ. ಅಲ್ಲದೆ ರೂಲಿಂಗ್ ಪಾರ್ಟಿ ಶಾಸಕರಿಗೇ ಒಳಗೆ ಬಿಡುವುದಿಲ್ಲವಾ? ನಿಮಗೆಷ್ಟು ಧೈರ್ಯ ? ಎಂದು ಶಾಸಕರು ಕರ್ತವ್ಯದ ಮೇಲಿದ್ದ ಇಲ್ಲಿನ ಪೊಲೀಸರ ಮೇಲೆ ಗುಡುಗಿದರೆನ್ನಲಾಗಿದೆ. ಆದರೆ ಲಾಕ್ಡೌನ್ ಮಾರ್ಗಸೂಚಿ ಸಡಿಲಗೊಳಿಸಲು ಸಾಧ್ಯವೇ ಇಲ್ಲ. ನೀವು ಇದುವರೆಗೆ ಎಲಿದ್ದರೋ ಅಲ್ಲಿಗೇ ಹೋಗಿ ಎಂದು ಪೊಲೀಸರೂ ಅವರಿಗೆ ತಿರುಗೇಟು ನೀಡಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲದಂತೆ ಶಾಸಕರು ಸಹಚರರು ಮತ್ತೆ ಬೆಂಗಳೂರಿನತ್ತ ಮುಖ ಮಾಡಿದರು.