ಹುಬ್ಬಳ್ಳಿ: ನಗರದ ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಚೆಕ್ ಪೋಸ್ಟ್ ತೆರವುಗೊಳಿಸಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಿಮ್ಸ್ ಆಸ್ಪತ್ರೆಯ ಹಿಂಭಾಗದಲ್ಲಿರುವ ಪೈ ಹೋಟೆಲ್ ಬಳಿ ನಿರ್ಮಿಸಲಾಗಿದ್ದ ಚೆಕ್ ಪೋಸ್ಟ್ ತೆರವುಗೊಳಿಸಿರುವುದರಿಂದ ಕಿಮ್ಸ್ ಗೆ ಯಾರು ಬೇಕಾದರೂ ಹೋಗಬಹುದು, ಒಳಗಿದ್ದವರು ಹೊರಗಡೆ ಬರಬಹುದಾದ ಆತಂಕವಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ಇರುವವರನ್ನು ಇರಿಸಲಾಗಿದೆ ಜೊತೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ 22 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯ ಎರಡು ವಿಭಾಗಗಳನ್ನು ಸಿಲ್ ಡೌನ್ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿ ಚೆಕ್ ಪೋಸ್ಟ್ ತೆರವುಗೊಳಿಸಿರುವುದು ಸೂಕ್ತವಲ್ಲ. ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು
ಒತ್ತಾಯಿಸುತ್ತಿದ್ದಾರೆ.
ಅಶೋಕ ನಗರ ಬ್ರಿಡ್ಜ್ ಬಳಿಯೂ ತೆರವು ಹುಬ್ಬಳ್ಳಿಯ ಅಶೋಕನಗರ ಬ್ರಿಡ್ಜ್ ಕೆಳಗೆ ಇರುವ ಚೆಕ್ ಪೊಸ್ಟ್ ನ್ನು ತೆರುವುಗೊಳಿಸಲಾಗಿದೆ. ಅಶೋಕನಗರ ಬ್ರಿಡ್ಜ್ ನಿಂದ ಒಂದು 1 ಕಿ.ಲೋ ಮೀಟರ್ ಅಂತರದಲ್ಲಿ ಕಂಟೈನ್ ಮೆಂಟ್ ಪ್ರದೇಶ ಇದೆ. ಕಳೆದ ಒಂದು ತಿಂಗಳಿನಿಂದ ಹಾಕಲಾಗಿದ್ದ ಚೆಕ್ ಪೊಸ್ಟ್ ನ್ನು ತೆರುವುಗೊಳಿಸಲಾಗಿದೆ. ಅಶೋಕನಗರ ಬ್ರಿಡ್ಜ್ ಮುಖಾಂತರ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.