ಚೆನ್ನೈ: ರಾಜ್ಯದ ಮುಖ್ಯಮಂತ್ರಿ ಎಡಪಡ್ಡಿ ಕೆ. ಪಲನಿಸ್ವಾಮಿ ಅವರು ಏ.26ರಿಂದ ಏ.29ರವರೆಗೆ ಚೆನ್ನೈ, ಕೊಯಮತ್ತೂರ್, ಮಧುರೈ ಪ್ರದೇಶಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಿರುವುದಾಗಿ ಘೋಷಿಸಿದ್ದಾರೆ.
ರಾಜ್ಯದ ಪ್ರಮುಖ ಪ್ರದೇಶಗಳಾದ ಚೆನ್ನೈ, ಕೊಯಮತ್ತೂರು, ಮಧುರೈ ಗಳನ್ನು ಏ.26ರ ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ಲಾಕ್ ಡೌನ್ ನಲ್ಲಿರಲಿದ್ದು, ಸೇಲಂ ಮತ್ತು ತ್ರಿಪುರ ಗಳಲ್ಲಿ ಏ.26ರ ಬೆಳಗ್ಗೆ 6ರಿಂದ ರಾತ್ರಿ 9ರ ವರೆಗೆ ಲಾಕ್ ಡೌನ್ ಜರಿಯಲ್ಲಿರುತ್ತದೆ.
ಕೊಯಂಬೇಡು ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಹೊರತು ಪಡಿಸಿ ಬೇರೆ ಸಣ್ಣ ತರಕಾರಿ, ಹಣ್ಣುಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆಸ್ಪತ್ರೆ, ಪೊಲೀಸ್, ವಿದ್ಯುತ್ ಸೇರಿದಂತೆ ಹಲವು ಸೇವೆಗಳು ಕಾರ್ಯನಿರ್ವಹಿಸಲಿದೆ.
ಶೇ.33ರಷ್ಟು ಸಿಬ್ಬಂದಿಗಳನ್ನೊಳಗೊಂಡ ಬ್ಯಾಂಕ್ ಗಳು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಾಗೂ ಎಲ್ಲಾ ಎ.ಟಿ.ಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.
ಅಮ್ಮ ಕ್ಯಾಂಟೀನ್ ಊಟದ ಸೇವೆ ನಿರಂತರ ನೀಡಲಿದೆ ಎಂದು ತಿಳಿಸಿದ್ದರು. ಆದರೂ ಕೊಯಂಬೇಡು ಮಾರುಕಟ್ಟೆಯಲ್ಲಿ ಜನರು ಯಾವುದೇ ಸಾಮಾಜಿಕ ಅಂತರವಿಲ್ಲದೆ ಓಡಾಡುತ್ತಿದ್ದಾರೆ ಎಂಬುದು ವರದಿಯಾಗಿದೆ.
Tamil Nadu: People throng Koyambedu vegetable market in Chennai to buy essentials. Chief Minister Edappadi Palaniswami has announced a complete lockdown in the city from April 26 to April 29, between 6 AM & 9 PM. #CoronaLockdown pic.twitter.com/ap0vDUfMm1
— ANI (@ANI) April 25, 2020