Tuesday, July 5, 2022

Latest Posts

ಚೌಕಾಬಾರೆ ಆಟವಾಡುವಾಗ ಹಣದ ವಿಚಾರಕ್ಕೆ ಜಗಳ: ತಮ್ಮನೇ ಅಣ್ಣನನ್ನು ಥಳಿಸಿ ಕೊಂದ!

ಚಿಕ್ಕಮಗಳೂರು: ಚೌಕಾಬಾರೆ ಆಟವಾಡುವಾಗ ಹಣದ ವಿಚಾರಕ್ಕೆ ಜಗಳ ಸಂಭವಿಸಿ, ತಮ್ಮನೇ ಅಣ್ಣನನ್ನು ಥಳಿಸಿ ಕೊಲೆ ಮಾಡಿರುವ ಘಟನೆ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ಉಪ್ಪಾರ ಬೀರನಹಳ್ಳಿಯ ಪಿಡಬ್ಲ್ಯುಡಿ ಕ್ವಾಟ್ರಸ್ ನಲ್ಲಿ ನಡೆದಿದೆ.
ಅರುಣ್(26) ಎಂಬಾತ ಕೊಲೆಗೀಡಾಗಿದ್ದು, ಸಹೋದರ ಕಿರಣ್ ಆರೋಪಿಯಾಗಿದ್ದಾನೆ. ಒಬ್ಬರು ಚೌಕಾಬಾರ ಆಡುವಾಗ ಹಣದ ವಿಚಾರದಲ್ಲಿ ಜಗಳ ನಡೆದು ಹಿಂದೆ ತಾನು ನೀಡಿದ್ದ ಸಾಲವನ್ನು ಹಿಂತಿರುಗಿಸುವಂತೆ ಕಿರಣ್ ಒತ್ತಾಯಿಸಿದ್ದಾನೆ. ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕೆಳಕ್ಕೆ ಬಿದ್ದಾರುಣ್ ತಲೆಗೆ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ಕಿರಣ್ ನನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss