ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರ ಅಟ್ಟಹಾಸ: 15 ಸೈನಿಕರಿಗೆ ಗಾಯ,17 ಯೋಧರು ಹುತಾತ್ಮ

0
89

ರಾಯಪುರ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, 17 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 15 ಯೋಧರು ಗಾಯಗೊಂಡಿದ್ದಾರೆ.

ಮಿನ್ಪಾ ಹಾಗೂ ಕಸಲ್ಪಾಡ್ ಅರಣ್ಯದ ಬಳಿ ಶನಿವಾರ ರಾತ್ರಿ ಮಾವೋವಾದಿಗಳು ಗುಂಡಿನ ಸುರಿಮಳೆಗೈದಿದ್ದು, ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿ ಸಹ ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 5 ತಾಸು ಗುಂಡಿನ ದಾಳಿ ನಡೆದಿದ್ದು, ಈ ವೇಳೆ 17 ಯೋಧರು ಹುತಾತ್ಮರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ಕಾರ್ಯಪಡೆ (ಎಸ್‌.ಟಿ.ಎಫ್) ಹಾಗೂ ಜಿಲ್ಲಾ ರಕ್ಷಣಾ ದಳದ 17 ಯೋಧರ ಮೃತ ದೇಹಗಳನ್ನು ವಶಪಡಿಸಿ ಕೊಳ್ಳಲಾಗಿದೆ. ದಾಳಿ ವೇಳೆ ಮಾವೋವಾದಿಗಳು ಭದ್ರತಾ ಸಿಬ್ಬಂದಿಯ 16 ಶಸ್ತ್ರಾಸ್ತ್ರ ಹೊತ್ತೊಯ್ದಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ದುರ್ಗೇಶ್ ಮಾಧವ್ ಆವಸ್ತಿ ತಿಳಿಸಿದ್ದಾರೆ.

ದಾಳಿಯಲ್ಲಿ ಗಾಯಗೊಂಡಿರುವ 15 ಭದ್ರತಾ ಸಿಬ್ಬಂದಿಯನ್ನು ರಾಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲರ ದಾಳಿಗೂ ಮೊದಲು ಭದ್ರತಾ ಸಿಬ್ಬಂದಿಯು ಸುಕ್ಮಾ ಜಿಲ್ಲೆಯಲ್ಲಿ ಬೃಹತ್ ಕಾರ್ಯಾಚರಣೆ ಕೈಗೊಂಡಿತ್ತು. ಇದಕ್ಕೆ ಪ್ರತಿಯಾಗಿ ನಕ್ಸಲರು ರಾತ್ರೋರಾತ್ರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹುತಾತ್ಮರಾದ 17 ಭದ್ರತಾ ಸಿಬ್ಬಂದಿಗಳಿಗೆ ಇಂದು ಗೌರವ ಸಮರ್ಪಿಸಿದರು

LEAVE A REPLY

Please enter your comment!
Please enter your name here