Tuesday, June 28, 2022

Latest Posts

ಜಂಟಲ್ಮೆನ್ ನಿರ್ದೇಶಕರ ಜೊತೆ ಪ್ರಣಮ್ ಹೊಸ ಚಿತ್ರ? ಮಾಸ್ ಅವತಾರದಲ್ಲಿ ಮಿಂಚಲಿದ್ದಾರೆ ಪ್ರಜ್ವಲ್ ಸಹೋದರ

ಕನ್ನಡ ಚಿತ್ರರಂಗದಲ್ಲಿ  ಹೆಸರು ಪಡೆದ ನಟ  ದೇವರಾಜ್. ಖಳ ನಟನಾಗಿ, ಹೀರೋ ಆಗಿ, ಪೋಷಕ ಪಾತ್ರಗಳಲ್ಲೂ ಅವರು ಮಿಂಚು ಹರಿಸಿದ್ದಾರೆ. ಅವರ ಇಡೀ ಕುಟುಂಬವೇ ಈಗ ಚಂದನವನದಲ್ಲಿ ಸಕ್ರಿಯ ಆಗಿದೆ. ದೇವರಾಜ್ ಮೊದಲ ಪುತ್ರ ಪ್ರಜ್ವಲ್ ದೇವರಾಜ್ ಈಗಾಗಲೆ ಸಿನಿಮಾದಲ್ಲಿ  ನಟಿಸಿ  ಪ್ರೇಕ್ಷಕರ ಮನಗೆದ್ದಿದ್ದಾರೆ.ಅಷ್ಟೇ  ಅಲ್ಲದೇ  ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಕೂಡ ಇತ್ತೀಚೆಗೆ ತೆರೆಕಂಡ ’ಲಾ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ  ಕಾಲಿಟ್ಟಿದ್ದಾರೆ.

ಮೊದಲ ಸಿನಿಮಾದಲ್ಲಿಯೇ ಅವರು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇನ್ನು ದೇವರಾಜ್ ಅವರ ಎರಡನೇ ಪುತ್ರ ಪ್ರಣಮ್ ಕೂಡ ನಟನೆಯ  ಕಡೆಗೆ  ಪಾದರ್ಪಣೆ ಮಾಡುತ್ತಿದ್ದಾನೆ.

ಪ್ರಣಮ್ ಈಗಾಗಲೇ ದ್ವಿಭಾಷಾ ಚಿತ್ರವೊಂದರ ಶೂಟಿಂಗ್ ಬಹುತೇಕ ಮುಗಿಸಿದ್ದಾರೆ. ಸಾಯಿ ಶಿವನ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಹಾಡು ಮತ್ತು ಟಾಕಿ ಪೋರ್ಷನ್ ಕೆಲ ‘ಭಾಗದ ಚಿತ್ರಿಕರಣ ಬಾಕಿ ಉಳಿದಿದೆ. ಲಾಕ್‌ಡೌನ್‌ನಿಂದ

ಚಿತ್ರ ಅ‘ರ್ಕ್ಕೆ ನಿಂತಿದೆ. ಇದರ ಜೊತೆಗೆ ಜಂಟಲ್‌ಮೆನ್ ಖ್ಯಾತಿಯ ನಿರ್ದೇಶಕ ಜಡೇಶ್ ಅವರ ಮುಂದಿನ ಚಿತ್ರದಲ್ಲಿ ಪ್ರಣಮ್ ನಟಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಪ್ರಣಮ್ ಕನ್ನಡದ ಮತ್ತೊಬ್ಬ ಹ್ಯಾಂಡ್ಸಮ್ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ಅವರ ಚೊಚ್ಚಲ ಚಿತ್ರ ’ಕುಮಾರಿ ೨೧ ಎ್ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡದಿದ್ದರೂ ಪ್ರಣಮ್ ಗಮನ ಸೆಳೆದಿದ್ದರು. ಇದೀಗ ಪ್ರಣಮ್ ಹೊಸ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ’ಜಂಟಲ್‌ಮೆನ್’ ಚಿತ್ರದ ನಿರ್ದೇಶಕ ಜಡೇಶ್ ಅವರ ಮುಂದಿನ ಚಿತ್ರದಲ್ಲಿ ಪ್ರಣಮ್ ನಟಿಸಲಿದ್ದಾರೆಂದು ಗೊತ್ತಾಗಿದೆ. ಈ ಹಿಂದೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಪ್ರಣಮ್ ಈ ಚಿತ್ರದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.  ಇನ್ನೇನು  ಚಿತ್ರದ  ಕಥೆಯನ್ನು  ಕೇಳಿಲ್ವಂತೆ. ಹೀಗಾಗಿ  ಅದನ್ನು ಕೇಳಿ  ಪ್ರಣಮ್  ನಿ‘ರ್ರಿಸುತ್ತಾರಂತೆ.  ಈ  ಚಿತ್ರದ  ಕುರಿತು  ಚಿತ್ರತಂಡವೇ  ಶೀಘ್ರದಲ್ಲೇ  ಹೇಳಿಕೊಳ್ಳಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss