Wednesday, July 6, 2022

Latest Posts

ಜಂಬುಕೇಶ್ವರ ದೇವಾಲಯದಲ್ಲಿ ಸಾವಿರಾರು ವರ್ಷಗಳ 505 ಚಿನ್ನದ ನಾಣ್ಯ ಪತ್ತೆ

ಚೆನ್ನೈ: ತಮಿಳುನಾಡಿನ ತಿರುವನೈಕಾವಲ್ ನಲ್ಲಿರುವ ಜಂಬುಕೇಶ್ವರ ದೇವಾಲಯದ ಬಳಿ ಭೂಮಿಯಲ್ಲಿ ಪಾತ್ರೆಯೊಳಗೆ 1,716 ಕೆ.ಜಿ.ತೂಕ ಇರುವ 505 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದು, ಒಂದು ಸಾವಿರದಿಂದ ಒಂದು ಸಾವಿರದ ಇನ್ನೂರು ವರ್ಷಗಳ ಹಿಂದಿನದ್ದಾಗಿರಬಹುದೆಂದು ಅಂದಾಜಿಸಲಾಗಿದೆ.

ದೇವಾಲಯದ ಆಡಳಿತ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದ್ದು, ಪತ್ತೆಯಾದ ನಾಣ್ಯಗಳಲ್ಲಿ ಅರೆಬಿಕ್ ಬರಹ ಕಂಡುಬಂದಿದೆ. ನಾಣ್ಯಗಳನ್ನು ಮಡಿಕೆಯೊಳಗೆ ಇಟ್ಟು ಹೂತಿಡಲಾಗಿದ್ದು, ಭೂಮಿಯನ್ನು ಅಗೆಯುವ ಸಂದರ್ಭದಲ್ಲಿ ಇದು ಪತ್ತೆಯಾಗಿದೆ. ಭೂಮಿಯನ್ನು 7 ಅಡಿ ಅಗೆದ ಸಂದರ್ಭದಲ್ಲಿ ನಾಣ್ಯಗಳು ಕಾಣಿಸಿವೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಮಣ್ಣಿನ ಪಾತ್ರೆ ಸಹಿತ ಚಿನ್ನದ ನಾಣ್ಯಗಳನ್ನು ತಮಿಳುನಾಡು ಪೊಲೀಸರಿಗೆ ಒಪ್ಪಿಸಿದ್ದು, ಹೆಚ್ಚಿನ ತನಿಖೆಗಾಗಿ ಖಜಾನೆಯಲ್ಲಿ ಇಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss