Monday, August 8, 2022

Latest Posts

ಜಕಾರ್ತಾದಿಂದ ಟೇಕ್​ ಆಫ್​ ​ಆಗಿದ್ದ ಶ್ರೀವಿಜಯ ಏರ್ ವಿಮಾನ ಸಮುದ್ರದಲ್ಲಿ ಪತನ: ಅವಶೇಷಗಳು ಪತ್ತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜಕಾರ್ತಾದಿಂದ ಟೇಕ್​ ಆಫ್​ ​ಆಗಿದ್ದ ಶ್ರೀವಿಜಯ ಏರ್ ವಿಮಾನ ಸಮುದ್ರಕ್ಕೆ ಅಪ್ಪಳಿಸಿದ್ದು, ಅದರ ಅವಶೇಷಗಳು ಲಭಿಸಿವೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್‌ ಕಡೆಗೆ ಹೊರಟಿದ್ದ 62 ಪ್ರಯಾಣಿಕರಿದ್ದ ವಿಮಾನ ಟೇಕ್​ ಆಫ್​ ಆದ ಬಳಿಕ ಸಂಪರ್ಕ ಕಳೆದುಕೊಂಡ ವಿಮಾನ ಕ್ಷಣಾರ್ಧದಲ್ಲಿ ಪತನಗೊಂಡಿತ್ತು.
ಇನ್ನು ಸಮುದ್ರದಲ್ಲಿ ಸಿಕ್ಕ ಅವಶೇಷಗಳನ್ನು ಜಕಾರ್ತಾದ ಬಂದರಿನಲ್ಲಿ ಪ್ರದರ್ಶಿಸಲಾಗಿದೆ. ಇಂಡೋನೇಷ್ಯಾದ ಅಧಿಕಾರಿಗಳು ಜಾವಾ ಸಮುದ್ರದಲ್ಲಿ 23 ಮೀಟರ್ (75 ಅಡಿ) ಆಳದಲ್ಲಿ ವಿಮಾನದ ಭಾಗಗಳನ್ನು ಪತ್ತೆ ಮಾಡಿದ್ದಾರೆ.
ನೌಕಾಪಡೆಯ ಹಡಗಿನಲ್ಲಿರುವ ಸೋನಾರ್ ಉಪಕರಣಗಳ ಮೂಲಕ ವಿಮಾನದ ಸಿಗ್ನಲ್ ಪತ್ತೆ ಮಾಡಿದ ನಂತರ ಶ್ರೀವಿಜಯ ಏರ್ ಫ್ಲೈಟ್ 182 ಗಾಗಿ ಹುಡುಕಾಟ ನಡೆಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss