Wednesday, July 6, 2022

Latest Posts

ಜಕ್ಕನಕಟ್ಟಿ, ಚಂದಾಪೂರ ಅರಣ್ಯದಲ್ಲಿ 6 ಕಾಡಾನೆಗಳ ಪ್ರತ್ಯಕ್ಷ : ಆತಂಕ ಸೃಷ್ಠಿ

ಹೊಸ ದಿಗಂತ ವರದಿ, ಶಿಗ್ಗಾಂವ:

ಜಿಲ್ಲೆಯ ಶಿಗ್ಗಾವಿ ತಾಲೂಕಿನ ಜಕ್ಕನಕಟ್ಟಿ ಮತ್ತು ಚಂದಾಪೂರ ಮದ್ಯದಲ್ಲಿಯ ಅರಣ್ಯದಲ್ಲಿ 6 ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗುವ ಮೂಲಕ ಅಲ್ಲಿಯ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರ ರಾತ್ರಿಯ ಸಮಯದಲ್ಲಿ ಉತ್ತರಕನ್ನಡ ತಾಲೂಕಿನ ಯಲ್ಲಾಪೂರ ಅರಣ್ಯದ ಪ್ರದೇಶದಿಂದ ಬಂದ ಆನೆಗಳಾಗಿವೆ ಎಂದು ದುಂಡಶಿ ವಲಯ ಅರಣ್ಯ ಇಲಾಖೆಯ ಅಧಿಕಾರಿ ರಮೇಶ ಶೇಖ್‌ಸನದಿ ತಿಳಿಸಿದ್ದು, ಜನವಸತಿ ಪ್ರದೇಶಗಳಿಗೆ ಹೋಗದಂತೆ ತಡೆದು ಅರಣ್ಯ ಪ್ರದೇಶಕ್ಕೆ ಕಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ, ಇದಕ್ಕೆ ಅಕ್ಕಪಕ್ಕದ ಗ್ರಾಮಗಳ ಜನರ ಸಹಕಾರ ಮುಖ್ಯವಾಗಿದ್ದು ಅರಣ್ಯ ಇಲಾಖೆ ನೀಡುವ ಪ್ರತಿ ಸೂಚನೆಗೆ ಸ್ಪಂದಿಸಿ ಸಹಕಾರ ನೀಡಿದರೆ ಮಾತ್ರ ಸುರಕ್ಷಿತವಾಗಿ ಆನೆಗಳನ್ನು ಕಾಡಿಗೆ ತೆರಳಿಸಲು ಸಹಾಯವಾಗುತ್ತದೆ, ಇಲ್ಲಿಯವರೆಗೂ ಜಮೀನಿಗೆ ಮತ್ತು ರೈತರಿಗೆ ಯಾವುದೇ ಹಾನಿ ಮಾಡಿಲ್ಲ, ಈ ಪ್ರದೇಶದಲ್ಲಿ ಇದೇ ಪ್ರಥಮ ಬಾರಿಗೆ ಕಾಡಾನೆಗಳ ಹಿಂಡು ಕಂಡು ಬಂದಿದ್ದು ಜನತೆಯ ಸಹಕಾರ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಕಾಡಾನೆಗಳು ಬೀಡು ಬಿಟ್ಟ ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮುಕ್ಕಾಂ ಹೂಡಿದ್ದು, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅವಶ್ಯಕತೆ ಬಿದ್ದರೆ, ಯಲ್ಲಾಪೂರ ಅರಣ್ಯ ಇಲಾಖೆಯ ಅಧಿಕಾರಿಗಳನ್ನ ಹಾಗೂ ಸಿಬ್ಬಂದಿಗಳನ್ನ ಕರೆಯಿಸಿ ಸುರಕ್ಷಿತವಾಗಿ ಆನೆಗಳ ಬಂದ ಅರಣ್ಯಕ್ಕೆ ಮರಳಿಸುವ ಕಾರ್ಯ ಮಾಡಲಾಗುವುದೆಂದು ಹೇಳಿರುವರು.
ಸುದ್ದಿ ತಿಳಿದು ಸ್ಥಳಕ್ಕೆ ಶಿಗ್ಗಾವಿ ಪುರಸಭೆ ಅದ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾದ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಸದಸ್ಯ ರಮೇಶ ವನಹಳ್ಳಿ, ಮುಖಂಡ ಸುದೀರ ಲಮಾಣಿ ಆಗಮಿಸಿ ಸೇರಿದ್ದ ಜನರಲ್ಲಿ ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ಕಳೆದ 7-8 ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಎರಡು ಆನೆಗಳು ಬಂದಿದ್ದವು ಈ ಸಂದರ್ಭ  ಬೆಳೆಗಳಿ ಹೆಚ್ಚಿನ ರೀತಿಯ ಹಾನಿಯನ್ನು ಮಾಡುವುದಾಗಲಿ, ಜನತೆಗೆ ಯಾವುದೇ ರೀತಿಯ ತೊಂದರೆಯನ್ನು ಮಾಡದೇ ಅಲ್ಲಿನ ಸುತ್ತಲಿನ ಪ್ರದೇಶದಲ್ಲಿ ಒಂದೆರಡು ದಿನಗಳ ಕಾಲ ಸ್ವಚ್ಛಂದವಾಗಿ ಆಹಾರವನ್ನು ಸವಿದು ಮತ್ತೆ ಕಾಡಿನತ್ತ ಪ್ರಯಾಣವನ್ನು ಬೆಳೆಸಿದ್ದವು ಎಂದು ಅರಣ್ಯ ಇಲಾಖೆಯ ಅಧಿಕರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss