Thursday, July 7, 2022

Latest Posts

ಜಗತ್ತಿನಲ್ಲಿಯೇ ಅತಿ ವೇಗವಾಗಿ ತಂತ್ರಜ್ಞಾನ ತಾಣವಾಗಿ ಹೊರಹೊಮ್ಮಿದ ‘ಬೆಂಗಳೂರು’

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಭಾರತದ ಐಟಿ (ಮಾಹಿತಿ ತಂತ್ರಜ್ಞಾನ) ರಾಜಧಾನಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು, ತನ್ನ ಪ್ರಬುದ್ಧ ತಂತ್ರಜ್ಞಾನ ಪರಿಸರದಿಂದಾಗಿ 2016ರಿಂದ ಜಗತ್ತಿನಲ್ಲಿಯೇ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ತಂತ್ರಜ್ಞಾನ ತಾಣವಾಗಿ ಹೊರಹೊಮ್ಮಿದೆ. ಕಳೆದ 2016ರಲ್ಲಿ 1.3 ಶತಕೋಟಿ ಡಾಲರ್‌ನಿಂದ 2020ರಲ್ಲಿ 7.2 ಶತಕೋಟಿ ಡಾಲರ್‌ನಷ್ಟು ಏರಿಕೆಯಾಗುವ ಮೂಲಕ ಬೆಂಗಳೂರಿನಲ್ಲಿ ಹೂಡಿಕೆ ಪ್ರಮಾಣವು 5.4 ಪಟ್ಟು ಹೆಚ್ಚಳಗೊಂಡಿದೆ ಎಂಬ ಸಂಗತಿಯನ್ನು ಡೀಲ್‌ರೂಂ.ಕಾಂ ಡಾಟಾ ವಿಶ್ಲೇಷಣೆಯು ಲಂಡನ್‌ನಲ್ಲಿ ಬಿಡುಗಡೆಗೊಳಿಸಿರುವ ಹೊಸ ಸಂಶೋಧನೆಯು ಬಹಿರಂಗಪಡಿಸಿದೆ.

ಬೆಂಗಳೂರಿನ ತಂತ್ರಜ್ಞಾನ ಪ್ರಬುದ್ಧತೆ ಅನಾವರಣ
ಕಳೆದ 4 ವರ್ಷಗಳಿಂದ ದೇಶದ ಐಟಿ ವಲಯವು ಹಿಂದೆಂದಿಗಿಂತಲೂ ಹೆಚ್ಚು ಬೆಳವಣಿಗೆಯನ್ನು ಕಂಡಿದೆ. ಅದರಲ್ಲಿಯೂ ಮುಖ್ಯವಾಗಿ ಬೆಂಗಳೂರು ದೇಶದಲ್ಲಷ್ಟೇ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿರದೆ, ಇಡೀ ವಿಶ್ವದಲ್ಲಿಯೇ ಅಗ್ರ ಸ್ಥಾನ ಪಡೆದುಕೊಂಡಿರುವುದು ರಾಷ್ಟ್ರದ ಐಟಿ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾಗರದು. ಇದೇ ವೇಳೆ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿಯೂ ಕಳೆದ 5 ವರ್ಷಗಳಲ್ಲಿ ಹೂಡಿಕೆಯು 0.7 ಶತಕೋಟಿಯಿಂದ 1.2 ಶತಕೋಟಿಗೆ ಏರಿಕೆ ಕಾಣುವುದರೊಂದಿಗೆ 1.7 ಪಟ್ಟು ವೃದ್ಧಿಯಾಗಿದೆ.

ಐರೋಪ್ಯ ನಗರಗಳನ್ನೇ ಹಿಂದಿಕ್ಕಿರುವ ಖ್ಯಾತಿ
ಮುಖ್ಯವಾಗಿ ಈ ಹಿಂದೆಲ್ಲ ಪಾಶ್ಚಾತ್ಯ ರಾಷ್ಟ್ರಗಳೇ ಮುಂಚೂಣಿಯಲ್ಲಿದ್ದ ಕ್ಷೇತ್ರದಲ್ಲಿ ಬೆಂಗಳೂರು ತಂತ್ರಜ್ಞಾನ ವಲಯವನ್ನು ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ ಎನ್ನುವುದು ಗಮನಾರ್ಹ. ಬೆಂಗಳೂರಿನ ಬಳಿಕ ಲಂಡನ್, ಮ್ಯೂನಿಚ್, ಬರ್ಲಿನ್ ಮತ್ತು ಪ್ಯಾರಿಸ್ ಐರೋಪ್ಯ ನಗರಗಳು ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ತಂತ್ರಜ್ಞಾನ ತಾಣಗಳಾಗಿ ಹೊರಹೊಮ್ಮಿವೆ.

ಬೆಂಗಳೂರಿನ ಹೂಡಿಕೆ ಪ್ರಮಾಣ
1.3 ಶತಕೋಟಿ ಡಾಲರ್ 2016ರಲ್ಲಿ ಹೂಡಿಕೆ
7.2 ಶತಕೋಟಿ ಡಾಲರ್ 2020ರಲ್ಲಿ ಹೂಡಿಕೆ
5.4 ಪಟ್ಟು ಕಳೆದ 4 ವರ್ಷಗಳಲ್ಲಿ ಹೆಚ್ಚಳ

ಭಾರತ-ಬ್ರಿಟನ್ ಪಾಲುದಾರಿಕೆ
ಭಾರತದಾದ್ಯಂತ ಹಲವು ನಗರಗಳಲ್ಲಿ ಲಂಡನ್ ಬಲಿಷ್ಠವಾದ ವ್ಯಾಪಾರ ಮತ್ತು ಹೂಡಿಕೆ ಸಂಬಂಧವನ್ನು ಹೊಂದಿದೆ. ಈ ವೇಳೆ ಸಂಶೋಧನೆಯು ಭವಿಷ್ಯದಲ್ಲಿ ಬ್ರಿಟನ್ ಮತ್ತು ಭಾರತದ ನಡುವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಪಾಲುದಾರಿಕೆಗೆ ಹಲವು ಅವಕಾಶಗಳು ಇರುವುದು ಗೋಚರಿಸುತ್ತಿದೆ. ಸಾಂಕ್ರಾಮಿಕದ ಹೊರತಾಗಿಯೂ ಭಾರತ ಮತ್ತು ಲಂಡನ್‌ನಲ್ಲಿನ ತಂತ್ರಜ್ಞಾನ ಸಂಸ್ಥೆಗಳು ಗೇಮ್ ಚೇಂಜಿಂಗ್ ತಂತ್ರಜ್ಞಾನಗಳನ್ನು ಸೃಷ್ಟಿಸುವ ಕಾರ್ಯವನ್ನು ಮುಂದುವರಿಸಿರುವುದು ಸ್ವಾಗತಾರ್ಹ ಎಂದು ಲಂಡನ್ ಆಂಡ್ ಪಾರ್ಟನರ‍್ಸ್‌ನ ಭಾರತದ ಮುಖ್ಯ ಪ್ರತಿನಿ ಹೆಮಿನ್ ಬರೂಚ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

5.4 ಪಟ್ಟು ಹೂಡಿಕೆ ಹೆಚ್ಚಳ
ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 4 ವರ್ಷಗಳಿಂದ ತಂತ್ರಜ್ಞಾನ ವಲಯದಲ್ಲಿ ಹೂಡಿಕೆಯ ಪ್ರಮಾಣ 5.4 ಪಟ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಹೂಡಿಕೆ ಸಂಸ್ಥೆಯಾದ ಲಂಡನ್ ಆಂಡ್ ಪಾರ್ಟನರ‍್ಸ್‌ನಿಂದ ನಡೆಸಲಾದ ಡೀಲ್‌ರೂಂ.ಕಾಂ ಡಾಟಾ ವಿಶ್ಲೇಷಣೆಯು ಇತ್ತೀಚಿಗೆ ಲಂಡನ್‌ನಲ್ಲಿ ಬಿಡುಗಡೆಗೊಳಿಸಿರುವ ಹೊಸ ಸಂಶೋಧನೆಯು ತಿಳಿಸಿದೆ. ಅದರಂತೆ 2016ರಲ್ಲಿ ಬೆಂಗಳೂರಿನ ತಂತ್ರಜ್ಞಾನ ವಲಯದಲ್ಲಿ 1.3 ಶತಕೋಟಿ ಡಾಲರ್‌ನಿಂದ 2020ರ ವೇಳೆಗೆ 7.2 ಶತಕೋಟಿ ಡಾಲರ್‌ಗೆ ಏರಿಕೆಗೊಂಡಿದೆ. ಇದೇ ವೇಳೆ ಲಂಡನ್‌ನ ತಂತ್ರಜ್ಞಾನ ಕ್ಷೇತ್ರದಲ್ಲಿ 2016 ಮತ್ತು 2020ರ ನಡುವೆ ಹೂಡಿಕೆಯು 3 ಪಟ್ಟು ಅಕಗೊಂಡಿದ್ದು, ಕ್ರಮವಾಗಿ 3.5 ಶತಕೋಟಿಯಿಂದ 10.5 ಶತಕೋಟಿ ಡಾಲರ್‌ಗೆ ಹೆಚ್ಚಳಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss