ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಗತ್ತಿನಲ್ಲಿ ಕೊರೋನಾ ಅಂತ್ಯಕಾಲ ಯಾವಾಗ? ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?

ಹೊಸದಿಗಂತ ಆನ್ಲೈನ್ ಡೆಸ್ಕ್

ಕೊರೋನಾ ಅಂತ್ಯಕಾಲ ಬಹಳಷ್ಟು ದೂರವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಮನುಷ್ಯರ ಬೇಜವಾಬ್ದಾರಿತನ ಇದಕ್ಕೆ ಕಾರಣ. ಕೊರೊನಾ ಸಾಂಕ್ರಾಮಿಕ ನಿಭಾಯಿಸಲು ವಿಶ್ವದ ರಾಷ್ಟ್ರಗಳು ಇನ್ನಿಲ್ಲದ ಕಷ್ಟ ಪಡುತ್ತಿವೆ. ಆದರೆ ಕೊರೋನಾ ಬಗ್ಗೆ ಜನರ ನಿರ್ಲಕ್ಷ್ಯ ಸಾಕಷ್ಟು ಗೊಂದಲ ಹುಟ್ಟಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.
ಅತ್ಯಾಧುನಿಕ ವೈದ್ಯಕೀಯ ಕ್ರಮಗಳ ಮೂಲಕ ಕೆಲ ತಿಂಗಳ ಅವಧಿಯಲ್ಲಿ ಕೊರೋನಾ ಸಾಂಕ್ರಾಮಿಕ ನಿಯಂತ್ರಿಸಬಹುದು ಎಂಬುದು ಈಗಾಗಲೇ ದೃಢಪಟ್ಟಿದೆ. ಈ ವರ್ಷದ ಮೊದಲ ಎರಡು ತಿಂಗಳ ಅಂಕಿ ಅಂಶ ಇದನ್ನು ಸ್ಪಷ್ಟವಾಗಿ ಹೇಳುತ್ತಿದೆ. ಕಳೆದ ಎರಡು ತಿಂಗಳಲ್ಲಿ ಸಾವು, ಹೊಸ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಇದರಿಂದಾಗಿ ವೈರಸ್ ಅನ್ನು ನಿಯಂತ್ರಿಸಬಹುದು ಹಾಗೂ ರೂಪಾಂತರಿಗಳನ್ನು ತಡೆಯಬಹುದು ಎಂಬುದು ಸ್ಪಷ್ಟವಾಗಿದೆ. ಈನಡುವೆ ನೈಟ್ ಕ್ಲಬ್ ಗಳು, ರೆಸ್ಟೋರೆಂಟ್ ಗಳು ಹಾಗೂ ಮಾರುಕಟ್ಟೆಗಳು ಜನ ದಟ್ಟಣಿಯಿಂದ ತುಂಬಿ ಹೋಗಿವೆ. ಇದು ನಿಜಕ್ಕೂ ಮತ್ತಷ್ಟು ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss