Wednesday, August 17, 2022

Latest Posts

ಜಗಮೋಹನ್ ದರ್ಬಾರಿನಡಿ ಕ್ರೈಸ್ತ ಮಿಷನರಿ, ಎನ್‌ಜಿಒ ಹಾವಳಿ: ಮತಾಂತರ ಬಳಿಕ ಹಿಂದು ದೇವಾಲಯಗಳ ಮೇಲೆ ಆಕ್ರಮಣ

ಅಮರಾವತಿ:ಆಂಧ್ರ ಪ್ರದೇಶದಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಹಾವಳಿ ಬಳಿಕ ಇದೀಗ ಹಿಂದು ದೇವಾಲಯಗಳ ಮೇಲೆ ಆಕ್ರಮಣಗಳು ಹೆಚ್ಚಲಾರಂಭಿಸಿದೆ. ಈ ಒಂದು ತಿಂಗಳಲ್ಲೇ ಚಿತ್ತೂರು ಜಿಲ್ಲೆಯೊಂದರಲ್ಲೇ ೫ಹಿಂದು ದೇವಾಲಯಗಳ ಮೇಲೆ ದಾಳಿಗಳು ನಡೆದಿದ್ದರೆ, ಈ ಒಂದು ವರ್ಷದಲ್ಲಿ ಆಕ್ರಮಣಕ್ಕೀಡಾದ ದೇವಾಲಯಗಳ ಸಂಖ್ಯೆ ೧೮ಕ್ಕೇರಿದೆ.ಆದರೆ ರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ಯಾವುದೇ ವರದಿ ಮಾಡದಿರುವುದು ಮತ್ತು ಬುದ್ಧಿಜೀವಿಗಳು ಈ ಬಗ್ಗೆ ಚಕಾರವೆತ್ತದಿರುವುದರಿಂದ ಇದು ದೇಶದ ಗಮನ ಸೆಳೆಯುತ್ತಿಲ್ಲ ಎಂಬುದಾಗಿ ಆಂಧ್ರ ಜನತೆ ಆಕ್ರೋಶ ವ್ಯಕ್ತಪಡಿಸಿದೆ. ಇದೀಗ ಈ ಬಗ್ಗೆ ಆಂಧ್ರ ಬಿಜೆಪಿ ಸಂಸದರ ನಿಯೋಗವೊಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಬಳಿಗೆ ತೆರಳಿ ಹಿಂದು ದೇಗುಲಗಳಿಗೆ ರಕ್ಷಣೆ ಒದಗಿಸಬೇಕೆಂದು ಮನವಿ ಸಲ್ಲಿಸಿದೆ. ಹಾಗೆಯೇ ರಾಜ್ಯಪಾಲರಿಗೂ ಬಿಜೆಪಿ ನಿಯೋಗ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.
ವಿಶೇಷವಾಗಿ ಪೂರ್ವಗೋದಾವರಿ ಜಿಲ್ಲೆಗಳಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಹಾವಳಿ ಕಳೆದೊಂದು ದಶಕದಿಂದ ತೀವ್ರಗೊಂಡಿದ್ದು, ವ್ಯಾಪಕ ಮತಾಂತರ ಚಟುವಟಿಕೆಗಳು ನಡೆದಿವೆ. ಇದೀಗ ಇದರ ಮುಂದುವರಿದ ಫಲಶ್ರುತಿಯೆಂಬಂತೆ ಹಿಂದು ದೇವಾಲಯಗಳ ಮೇಲೆ ಆಕ್ರಮಣ, ಹಿಂದು ದೇವರ ವಿಗ್ರಹಗಳ ಧ್ವಂಸದಂತಹ ಕೃತ್ಯಗಳು ಹೆಚ್ಚಲಾರಂಭಿಸಿದೆ. ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಸರಕಾರದಡಿ ಈ ಮಿಷನರಿಗಳು ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿರುವುದೇ ಈ ಆಕ್ರಮಣಗಳಿಗೆ ಕಾರಣ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಟೈಮ್ಸ್ ನೌ ರಾಷ್ಟ್ರೀಯ ಟಿವಿ ಚಾನೆಲ್ ವಿಸ್ತೃತ ವರದಿ ಪ್ರಸಾರ ಮಾಡಿದ ಬಳಿಕ , ಆಂಧ್ರದಲ್ಲಿ ಕ್ರೈಸ್ತ ಮಿಷನರಿಗಳ ಈ ದುಷ್ಕೃತ್ಯಗಳು ರಾಷ್ಟ್ರದ ಗಮನ ಸೆಳೆದಿದೆ. ಚಿತ್ತೂರು ಜಿಲ್ಲೆಯಲ್ಲಿ ಹೊಸದಾಗಿ ದೇವಾಲಯವೊಂದರ ನಂದಿ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸ ಗೈಯ್ಯುವುದರೊಂದಿಗೆ ಈ ಒಂದು ತಿಂಗಳಲ್ಲೇ ದಾಳಿಗೆ ತುತ್ತಾದ ಹಿಂದು ದೇಗುಲಗಳ ಸಂಖ್ಯೆ ೫ಕ್ಕೇರಿದೆ.
ಪೂರ್ವ ಗೋದಾವರಿ ಜಿಲ್ಲೆಯ ಅಂತರ್‌ವೇದಿಯಲ್ಲಿನ ಐತಿಹಾಸಿಕ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ನೆಲ್ಲೂರಿನ ಬಿಟ್ರಗುಂಟದ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಳಗಳ ಮೇಲೆ ದಾಳಿ ನಡೆದಿದ್ದು, ಪೀಠಪುರಂನ ಪುರಾಣಪ್ರಸಿದ್ಧ ದೇಗುಲದ ನಂದಿ ವಿಗ್ರಹವನ್ನು ನಾಶಗೊಳಿಸಲಾಗಿದೆ.ವಿಜಯವಾಡದ ಕನಕದುರ್ಗ ದೇವಾಲಯ ರಥ ಮತ್ತು ಅಂತರ್‌ವೇದಿ ದೇವಾಲಯದ ರಥವನ್ನು ಸುಟ್ಟು ಹಾಕಿದ ಕೃತ್ಯಗಳು ಆಂಧ್ರದ ಹಿಂದುಗಳ ಭಾವನೆಯನ್ನು ತೀವ್ರವಾಗಿ ಘಾಸಿಗೊಳಿಸಿರುವುದನ್ನು ಸಚಿವರ ಗಮನಕ್ಕೆ ನಿಯೋಗ ತಂದಿದೆ.
ಶಾಗೆ ಮನವಿ
ರಾಜ್ಯದಲ್ಲಿ ಹಿಂದು ದೇವಾಲಯಗಳ ಮೇಲೆ ಆಕ್ರಮಣಗಳು ಹೆಚ್ಚುತ್ತಿರುವಂತೆಯೇ, ಬಿಜೆಪಿ ಸಂಸದ ಜಿ.ವಿ.ಎಲ್.ನರಸಿಂಹ ರಾವ್ ಮತ್ತು ಸಿ.ಎಂ.ರಮೇಶ್ ಅವರ ನಿಯೋಗ ಗೃಹಸಚಿವ ಅಮಿತ್ ಶಾ ಅವರಿಗೆ ಮನವಿಯೊಂದನ್ನು ಸಲ್ಲಿಸಿ ಆಂಧ್ರದಲ್ಲಿ ಹಿಂದು ದೇವಾಲಯಗಳ ಮೇಲೆ ಹೆಚ್ಚುತ್ತಿರುವ ದಾಳಿ , ಪ್ರತಿಪಕ್ಷಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ವಿವರಿಸಿ ಹಿಂದು ದೇವಾಲಯಗಳಿಗೆ ರಕ್ಷಣೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಹಿಂದು ದೇಗುಲಗಳ ಮೇಲೆ ನಡೆಯುವ ಆಕ್ರಮಣಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯ ಸರಕಾರ , ದಾಳಿಗಳನ್ನು ಪ್ರತಿಭಟಿಸಿದ ಹಿಂದು ಕಾರ್ಯಕರ್ತರ ಮೇಲೆ ಜಾಮೀನು ಲಭಿಸದಂತಹ ಕೇಸುಗಳನ್ನು ದಾಖಲಿಸುತ್ತಿರುವುದನ್ನು ಕೂಡಾ ಶಾ ಗಮನಕ್ಕೆ ತರಲಾಗಿದೆ.
ಇತ್ತ ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಅವರು ಈ ದಾಳಿಗಳನ್ನು ಪ್ರತಿಭಟಿಸಿ “ಚಲೋ ಅಮಲಾಪುರಮ್” ಪ್ರತಿಭಟನೆಗೆ ಕರೆ ನೀಡಿದ್ದು, ಇದರಂತೆ,ಹಿಂದು ದೇವಾಲಯಗಳ ಮೇಲಿನ ಆಕ್ರಮಣಗಳನ್ನು ಖಂಡಿಸಿ ಪ್ರತಿಭಟಿಸಿದ ಹಿಂದು ನಾಯಕರನ್ನು ಬಂಸಲಾಗಿರುವುದನ್ನು ಬಿಜೆಪಿ ಸಂಸದರ ನಿಯೋಗ ಕೇಂದ್ರದ ಗಮನಕ್ಕೆ ತಂದಿದೆ.
ಕ್ರೈಸ್ತ ಮಿಷನರಿಗಳು ಮತ್ತು ನಕಲಿ ಎನ್‌ಜಿಒಗಳು ನೆರವಿನ ಹೆಸರಿನಲ್ಲಿ ಹಿಂದುಗಳನ್ನು ಮತಾಂತರಿಸುತ್ತಿದ್ದು, ಮೊದಲಿಗೆ ಹಿಂದುಗಳಲ್ಲಿ ಅವರ ದೇವರು, ಧರ್ಮ ಕುರಿತಂತೆ ಅಶ್ರದ್ಧೆ ಹುಟ್ಟುವಂತೆ ಮಾಡಲಾಗುತ್ತಿದ್ದು, ಅನಂತರ ಬ್ರೈನ್‌ವಾಷ್‌ಗೀಡಾದ ಹಿಂದುಗಳನ್ನು ಮತಾಂತರಗೊಳಿಸಲಾಗುತ್ತದೆ. ಈ ಮೂಲಕ ಅವರನ್ನು ಸ್ವಧರ್ಮದ ವಿರುದ್ಧವೇ ತಿರುಗಿಬೀಳುವಂತೆ ಮಾಡಲಾಗುತ್ತದೆ ಎಂಬುದಾಗಿ ವರದಿಗಳು ತಿಳಿಸಿವೆ.
ಹಿಂದು ದೇಗುಲಗಳಿಗೆ ದಾಳಿ:
ಡಾ.ಡೇವಿಡ್ ಫ್ರಾಲೆ ಕಳವಳ
ಆಂಧ್ರದಲ್ಲಿ ಹೆಚ್ಚುತ್ತಿರುವ ಕ್ರೈಸ್ತ ಮಿಷನರಿಗಳ ಮತಾಂತರ ಹಾವಳಿ ಮತ್ತು ಹಿಂದು ದೇಗುಲಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವ ಬಗ್ಗೆ ಭಾರತದಲ್ಲಿನ ಯಾವುದೇ ಬುದ್ಧಿಜೀವಿಗಳು, ಮಾನವ ಹಕ್ಕು ಗುಂಪುಗಳು,ಸ್ವಘೋಷಿತ ಅಸಹಿಷ್ಣುತೆ ವಿರೋಗಳು ಚಕಾರವೆತ್ತದಿದ್ದರೂ, ಅಮೆರಿಕದ ಖ್ಯಾತ ಚಿಂತಕ ಡಾ.ಡೇವಿಡ್ ಫ್ರಾಲೇ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಕ್ರೈಸ್ತ ಮಿಷನರಿಗಳು ಮತ್ತು ಎನ್‌ಜಿಒ ವೇಷದಲ್ಲಿರುವ ಈ ಶಕ್ತಿಗಳು ಹಿಂದುಗಳನ್ನು ಮತಾಂತರಿಸುವ ಹುನ್ನಾರವನ್ನು ವ್ಯಾಪಕಗೊಳಿಸಿವೆ. ತಿರುಪತಿ ಶ್ರೀವೆಂಕಟೇಶ್ವರ ದೇವಳ ಸೇರಿದಂತೆ ಅನೇಕ ಪ್ರಮುಖ ಹಿಂದು ಕ್ಷೇತ್ರಗಳನ್ನು ಈ ಶಕ್ತಿಗಳು ಗುರಿಯಾಗಿರಿಸಿವೆ ಎಂಬುದಾಗಿ ಅವರು ಟ್ವೀಟ್‌ನಲ್ಲಿ ಎಚ್ಚರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!