Saturday, June 25, 2022

Latest Posts

ಜಗ್ಗೇಶ್‌ರಿಂದ ಅಂಧರಿಗೆ ಗೂಡು: ಮಾ.12ಕ್ಕೆ ಜಗ್ಗೇಶ್-ಪರಿಮಳ ನಿವಾಸದ ಗೃಹ ಪ್ರವೇಶ

ತುಮಕೂರು: ಕೊರಟಗೆರೆ ಫ್ರೆಂಡ್ಸ್‌ಗುಂಪು ಮತ್ತು ಜಗ್ಗೇಶ್ ಅಭಿಮಾನಿ ಬಳಗ ಅಂಧ ಹಾಡುಗಾರ್ತಿಯರಿಗಾಗಿ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ಸುಮಾರು 8 ಲಕ್ಷರೂ.ಗಳ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ 9 ಚದರದ ಜಗ್ಗೇಶ್ -ಪರಿಮಳ ನಿವಾಸದ ಗೃಹ ಪ್ರವೇಶ ಮಾರ್ಚ್ 12 ರಂದು ನೆರವೇರಲಿದ್ದು, ಈ ಕಾರ್ಯಕ್ರಮಕ್ಕೆ ಜಗ್ಗೇಶ್ ದಂಪತಿ ಆಗಮಿಸಲಿದ್ದಾರೆ ಎಂದು ಫ್ರೆಂಡ್ಸ್ ಬಳಗದ ರವಿಕುಮಾರ್ ತಿಳಿಸಿದರು.

ಕೊರಟಗೆರೆಯ ಫ್ರೆಂಡ್ಸ್ ಬಳಗ ಮತ್ತು ಜಗ್ಗೇಶ್ ಅಭಿಮಾನಿಗಳ ಬಳಗ ಜೀ ಟಿವಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅಂಧ ಸೋದರಿಯರಾದ ಗೌರಮ್ಮ, ರತ್ನಮ್ಮ ಮತ್ತು ಮಂಜಮ್ಮ ಅವರಿಗಾಗಿ ಮನೆಯನ್ನು ನಿರ್ಮಿಸಿಕೊಡುವುದಾಗಿ ಜಗ್ಗೇಶ್ ಹೇಳಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಜಗ್ಗೇಶ್, ಪರಿಮಳ ಜಗ್ಗೇಶ್, ಜೀ ಕನ್ನಡದ ಮತ್ತು ಕಾಮಿಡಿ ಕಿಲಾಡಿಗಳ ತಂಡ ಆಗಮಿಸಲಿದೆ, ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್‍ಯ ಸ್ವಾಮಿಗಳು ಅಂಧ ಸೋದರಿಯರಿಗೆ ಮನೆಯ ಕೀಗಳನ್ನು ಹಸ್ತಾಂತರಿಸುವರು ಎಂದು ಅವರು ತಿಳಿಸಿದರು.

ಅಂದು ಬೆಳಗ್ಗೆ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಮೊದಲು ಭೇಟಿ ನೀಡುವ ಜಗ್ಗೇಶ್ ದಂಪತಿ, ನಂತರ ಕೊರಟಗೆರೆಯ ಬಾಲಕಿಯರ ಪ್ರೌಢಶಾಲೆಯಲ್ಲಿ ಸ್ವಚ್ಛಭಾರತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಬ್ಯಾಗ್ ವಿತರಿಸುವರು, ನಂತರ ಮಧುಗಿರಿ ಮಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಡಿ.ವಿ.ಹಳ್ಳಿಗೆ ತೆರಳುವರು ಎಂದು ತಿಳಿಸಿದರು.

ಈ ಮನೆಯನ್ನು ನಿರ್ಮಿಸುವಲ್ಲಿ ಫ್ರೆಡ್ಸ್ ಗುಂಪಿನ ಮತ್ತು ಜಗ್ಗೇಶ್ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಮಲ್ಲಣ್ಣ, ತಾಲೂಕು ಅಧ್ಯಕ್ಷ ಶಿವಶಂಕರ್, ಮುರಳಿ, ರಾಜು, ನಾಗರಾಜು, ನಟರಾಜು, ಪ್ರದಿಪ್, ಕಿರಣ್ ಇತರರು ಶ್ರಮಿಸಿರುವುದಾಗಿ ಅವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss