ಜನತಾ ಕರ್ಫ್ಯೂಗೆ 135 ಕೋಟಿ ಜನರ ಬೆಂಬಲ

0
95

ಹೊಸದಿಲ್ಲಿ: ಇಡೀ ವಿಶ್ವವನ್ನೇ ಆವರಿಸಿರುವ ಕೊರೋನಾ ಸೋಂಕು ವಿರುದ್ಧ ಹೋರಾಡುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ನೀಡಿದ ಜನತಾ ಕರ್ಫ್ಯೂ ಕರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಯಾವಾಗಲೂ ಭಾನುವಾರ ಸಿಕ್ಕರೆ ಸಾಕು, ಸಿನಿಮಾ, ಶಾಪಿಂಗ್, ಪ್ರವಾಸ, ಸುತ್ತಾಟ ಎಂದು ಸುತ್ತಾಡುತ್ತಿದ್ದ ಜನ, ದೇಶದ ನಾಯಕನ ಕರೆಗೆ ಓಗೊಟ್ಟು ಇಡೀ ದಿನ ಮನೆಯಲ್ಲಿ ಕಳೆಯುವ ಮೂಲಕ ಭಾರಿ ಬೆಂಬಲ ವ್ಯಕ್ತಪಡಿಸಿದರು.

ದೇಶದ ಎಲ್ಲ ಗ್ರಾಮ, ಪಟ್ಟಣ, ನಗರ, ಮಹಾನಗರ, ಮೆಟ್ರೋ ಸಿಟಿಗಳಲ್ಲಿ ಬಹುತೇಕ ಸೇವೆ ಸ್ಥಗಿತವಾಗಿದ್ದರಿಂದ ಹಾಗೂ ಯಾರ ಒತ್ತಾಯವೂ ಇಲ್ಲದೆ ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿದ ಕಾರಣ ಅಲ್ಲದೆ ಕೊರೋನಾವನ್ನು ಶತಾಯಗತಾಯ ತೊಲಗಿಸಲೇಬೇಕು ಎಂದು ಜನ ನಿಶ್ಚಯಿಸಿದ್ದ ಕಾರಣ ಭಾನುವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜನ ಮನೆಯಿಂದಲೂ ಹೊರಬರದೆ ತಾವು ಪ್ರಬುದ್ಧ ನಾಗರಿಕರು ಎಂಬುದನ್ನು ಸಾಬೀತು ಪಡಿಸಿದರು.

ಬಳಿಕ ದೇಶದಲ್ಲಿ ಕೊರೋನಾ ಎಂಬ ಮಹಾಮಾರಿಯನ್ನು ತಡೆಯಲು ಹಗಲಿರುಳು ಸೈನಿಕರಂತೆ ಸೇವೆ ಮಾಡುತ್ತಿರುವ ವೈದ್ಯರಿಗೆ, ನರ್ಸ್ ಗಳಿಗೆ ದೇಶವ್ಯಾಪಿ ಜನರು ಸಂಜೆ 5 ಗಂಟೆಗೆ ತಮ್ಮ ಮನೆಯ ಕಾಂಪೌಂಡ್ ನಿಂದ ಹೊರಬಂದು ಚಪ್ಪಾಳೆ, ಜಾಗಟೆ ಬಾರಿಸಿ, ಶಂಖ ಊದುವ ಮೂಲಕ ಕೃತಜ್ಞನತೆ ತಿಳಿಸಿದರು.

ಒಂದೇ ದಿನ ಮೂವರು ಸಾವು: ಮಾರಣಾಂತಿಕ ಕೊರೋನಾಗೆ ಭಾರತದಲ್ಲಿ ಒಂದೇ ದಿನ ಮೂವರು ಮೃತಪಟ್ಟಿದ್ದು, ಇವರಲ್ಲಿ ಒಬ್ಬರಿಗೆ ಸೋಂಕು ತಗುಲಿರುವ ಕುರಿತು ವೈದ್ಯಕೀಯ ವರದಿ ದೃಢಪಡಿಸಬೇಕಿದೆ. ಗುಜರಾತ್‌ನ ಸೂರತ್ ಆಸ್ಪತ್ರೆಯಲ್ಲಿ 69 ವರ್ಷದ ವ್ಯಕ್ತಿಯೊಬ್ಬ ಸೋಂಕಿನಿಂದ ಮೃತಪಟ್ಟರೆ, ಬಿಹಾರದ ಪಟನಾದಲ್ಲಿ 38 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಗುಜರಾತ್‌ನ ವಡೋದರಾ ಆಸ್ಪತ್ರೆಯಲ್ಲಿ 65 ವರ್ಷದ ಮಹಿಳೆ ಮೃತಪಟ್ಟಿದ್ದು, ಇವರಿಗೆ ಕೊರೋನಾ ದೃಢವಾಗಿರುವ ಕುರಿತು ವೈದ್ಯಕೀಯ ವರದಿ ಬರಬೇಕಿದೆ.

LEAVE A REPLY

Please enter your comment!
Please enter your name here