Thursday, August 18, 2022

Latest Posts

ಜನತಾ ಬಜಾರ್, ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಜಿ ಸಚಿವ ರೇವಣ್ಣ ಧರಣಿ

ಹಾಸನ: ಜನತಾ ಬಜಾರ್, ಸಹಕಾರ ಸಂಘಗಳ ಚುನಾವಣೆ ಮುಂದೂಡಿಕೆಗೆ ಸಹಕಾರ ಇಲಾಖೆ ಅಧಿಕಾರಿ ಹುನ್ನಾರ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾಜಿ ಸಚಿವ ರೇವಣ್ಣ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್ ಕಾಯ೯ಕತ೯ರು ಅನಿ೯ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಹಕಾರ ಇಲಾಖೆ ಅಧಿಕಾರಿ ಸುನೀಲ್ ಎಂಬುವವರು, ಜನತಾ ಬಜಾರ್ ಚುನಾವಣೆ, ಸಂಜೀವಿನಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ ಮುಂದೂಡಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ಜೆಡಿಎಸ್ ಮಾಡುತ್ತಿದೆ.

ಅಧಿಕಾರಿ ಸುನೀಲ್ ಬಿಜೆಪಿ ಪಕ್ಷದ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ರೇವಣ್ಮ,ಸಂಜೀವಿನಿ ಕೋ ಆಪರೇಟಿವ್ ಸಂಘ ಮತ್ತು ಆಸ್ಪತ್ರೆಯಲ್ಲಿ ಕಾನೂನು ಬಾಹಿರವಾಗಿ ಮತದಾರರ ಸೇರ್ಪಡಿಸಿದ್ದಾರೆ ಎಂದು‌ ಕಿಡಿದರು.

ಈ ಬಗೆಗೆ ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳದೇ ಇದ್ದರೆ ಧರಣಿ ಮುಂದುವರಿಸೋ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆ, ಬೇಲೂರು ಶಾಸಕ ಕೆ.ಎಸ್ ಲಿಂಗೇಶ್ ಸೇರಿ ನೂರಾರು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!