Sunday, June 26, 2022

Latest Posts

ಜನತೆಗೆ ಬಿಗ್ ರಿಲೀಫ್: ತೆರಿಗೆ ಪಾವತಿಗೆ ಜೂನ್ 30ರವರೆಗೂ ಗಡುವು ನೀಡಿದ ಹಣಕಾಸು ಸಚಿವಾಲಯ

ಹೊಸದಿಲ್ಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶದ ಜನತೆಗೆ ತೊಂದರೆ ಆಗದಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೆರಿಕೆ ಪಾವತಿಗೆ ಜೂನ್ 30ರ ವರೆಗೂ ಗಡುವು ವಿಸ್ತರಿಸಿದ್ದಾರೆ.

ಜೂನ್ 30ರವರೆಗೆ ಆದಾಯ ತೆರಿಗೆ, ಜಿ.ಎಸ್.ಟಿ, ಕಸ್ಟಮ್ ಡ್ಯೂಟಿ ಮತ್ತು ಕೇಂದ್ರೀಯ ಅಬಕಾತಿ ಸುಂಕ ಪಾವತಿ ಅವಧಿಯವನ್ನು ವಿಸ್ತರಿಸಲಾಗಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೆರಿಗೆ ಮತ್ತು ಬೆನಾಮಿ ಕಾಯಿದೆಗಳಿಗೆ (Taxation and Benami Acts ) ಮಂಗಳವಾರ ಸಹಿ ಹಾಕಿದ್ದಾರೆ.

2018-2019ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮತ್ತು ಆದಾರ್-ಪಾನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನು ಜೂ.30ಕ್ಕೆ ವಿಸ್ತರಿಸಲಾಗಿದೆ. ಪಿಎಂ ಕೇರ್ಸ್ ನಿಧಿಗೆ ನೀಡುವ ದೇಣಿಗೆಗೆ ಸಂಪೂರ್ಣ ತೆರಿಗೆ ವಿನಾಯ್ತಿ ನೀಡಲಾಗಿದೆ

ಮಾ. 20ರಿಂದ ಜೂ.29ರವರೆಗಿನ ಆದಾಯ ತೆರಿಗೆಯನ್ನು ಜೂ.30ರೊಳಗೆ ಪಾವತಿಸದಿದ್ದಲ್ಲಿ (ಉ. ಮುಂಗಡ ತೆರಿಗೆ, ಟಿಡಿಎಸ್, ಟಿಸಿಎಸ್) ಸಮೀಕರಣ ಲೆವಿ, ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ), ಸರಕುಗಳ ವಹಿವಾಟು ತೆರಿಗೆ (ಸಿಟಿಟಿ) ಗೆ 9% ರಷ್ಟು ಬಡ್ಡಿದರವನ್ನು ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss