Tuesday, July 5, 2022

Latest Posts

ಜನರ ಅಹವಾಲು ಆಲಿಸಿದ ಶಾಸಕಿ ಅನಿತಾಕುಮಾರಸ್ವಾಮಿ

ಹೊಸ ದಿಗಂತ ವರದಿ, ರಾಮನಗರ:

ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶಾಸಕಿ ಅನಿತಾಕುಮಾರಸ್ವಾಮಿ ಕ್ಷೇತ್ರ ಪ್ರವಾಸಕೈಗೊಂಡು ಜನರ ಸಮಸ್ಯೆ ಆಲಿಸಿದರು. ಕೂನಗಲ್ ಗ್ರಾಮದಲ್ಲಿ ಚರಂಡಿ, ಬೆಟ್ಟದ ರಸ್ತೆ ಅಭಿವೃದ್ಧಿ ಜವಳಗೆರೆದೊಡ್ಡಿ ಗ್ರಾಮದಲ್ಲಿ ವೆಂಕಟೇಗೌಡನ ಕೆರೆ ಹತ್ತಿರ ಹರಿಯುವ ಕೋಡಿ ಸಮೀಪ ಮನೆಗಳ ಹತ್ತಿರ ತಡೆಗೋಡೆ, ದಾಸರಹಳ್ಳಿ, ದಾಸೇಗೌಡನದೊಡ್ಡಿ, ತುಂಬೇನಹಳ್ಳಿ ಗ್ರಾಮಗಳಲ್ಲಿ ಚರಂಡಿ ನಿರ್ಮಾಣ, ಬೀದಿ ರಸ್ತೆ ಅಭಿವೃದ್ಧಿ ಪಡಿಸಬೇಕು ಇರುಳಿಗರದೊಡ್ಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ತೆರೆಯಬೇಕು ಎಂದು ಜನರು ಶಾಸಕರ ಭೇಟಿ ವೇಳೆ ಬೇಡಿಕೆ ಇಟ್ಟರು.
ಈ ಸಂದರ್ಭದಲ್ಲಿ ಜವಳಗೆರೆದೊಡ್ಡಿ ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಘಟಕ ಮತ್ತು ತುಂಬಿದ ವೆಂಕಟೇ ಗೌಡನ ಕೆರೆಗೆ ಬಾಗಿನ ಅರ್ಪಿಸಿದರು. ತಮ್ಮ ನಾಯಕನಹಳ್ಳಿ ಕಾಲೋನಿ ಜನರು ನಾವು ವಾಸಿಸುವ ಮನೆಗಳಿಗೆ ಇ-ಖಾತಾ ಸಮಸ್ಯೆ ಉಂಟಾಗಿದೆ ಖಾತೆ ಆಗುತ್ತಿಲ್ಲ ಗೋಮಾಳ ಅರಣ್ಯಭೂಮಿ ಪರಿವರ್ತನೆಗೆ ತಾವು ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳಿಗೆ ನಮ್ಮ ಸಮಸ್ಯೆ ತಿಳಿಸಿ ನಮಗೆ ಇ-ಖಾತೆ ಆಗುವಂತೆ ಮಾಡಬೇಕಿದೆ ಎಂದು ಮನವಿ ಮಾಡಿದರು.
ಜನರಿಂದ ಸಮಸ್ಯೆ ಆಲಿಸಿದ ಶಾಸಕಿ ಅನಿತಾಕುಮಾರಸ್ವಾಮಿ ಜನರ ಸಮಸ್ಯೆ ತಿಳಿದುಕೊಂಡು ಸ್ಥಳದಲ್ಲೇ ಕೆಲವು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು. ಸ್ಥಳದಲ್ಲೇ ಇದ್ದಗ್ರಾಪಂ ಪಿಡಿಓ, ಕಂದಾಯ ಅಧಿಕಾರಿಗಳಿಗೆ ಜನರ ಸಮಸ್ಯೆ ಸರಿಪಡಿಸಬೇಕುಎಂದು ತಿಳಿಸಿದರು. ಸಮಸ್ಯೆ ಹೇಳಿದ ಗ್ರಾಮಗಳ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಸ್ಥಳದ್ಲಲೇ ಮಾಡಿಸಿದರು. ಈ ವೇಳೆ ತುಂಬೇನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅನಿತಾಕುಮಾರಸ್ವಾಮಿ ಕಳೆದ ನಾಲ್ಕು ದಿನಗಳಿಂದ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ ಜನರು ಸಣ್ಣಪುಟ್ಟ ಸಮಸ್ಯೆ ಗಮನಕ್ಕೆ ತಂದಿದ್ದಾರೆ ಈಗಾಗಲೇ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ನಮ್ಮ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಕೆಲವೊಂದು ಗ್ರಾಮಗಳಲ್ಲಿ ಚರಂಡಿ ಸಮಸ್ಯೆ ಗಮನಕ್ಕೆ ತಂದಿದ್ದಾರೆ ಈಗಾಗಲೇ ಅವುಗಳ ಪಟ್ಟಿ ಮಾಡಲಾಗಿದ್ದು ಶೀಘ್ರದಲ್ಲೇ ಸಮಸ್ಯೆಇರುವ ಜಾಗಗಳಲ್ಲಿ ಚರಂಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಇನ್ನಿತರಜನರ ಸಮಸ್ಯೆಯನ್ನು ಸಂಬoಧಪಟ್ಟ ಇಲಾಖಾ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇನೆ ಕ್ಷೇತ್ರದ ಅಭಿವೃದ್ಧಿ ನನ್ನ ಸಂಕಲ್ಪ ಎಂದು ತಿಳಿಸಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ರಾಜ್ಯ ಜೆಡಿಎಸ್ ವಕ್ತಾರ ಬಿ. ಉಮೇಶ್, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ.ರಾಜಣ್ಣ, ತಾ.ಪಂ ಸದಸ್ಯ ಲಕ್ಷ್ಮಿ ಕಾಂತ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಅಶ್ವಥ್, ಪ್ರಚಾರ ಸಮಿತಿ ಅಧ್ಯಕ್ಷ ಆರ್. ಪಾಂಡುರoಗ, ಕಂಟ್ರಾಕ್ಟರ್ ತುಂಬೇನಹಳ್ಳಿ ಪ್ರಕಾಶ್, ಗ್ರಾಪಂ ಮಾಜಿ ಸದಸ್ಯ ಶಿವರಾಜು, ಮುಖಂಡರಾದ ಎಂ.ಪಿ.ವಾಸು ಪುಟ್ಟಮಾಸ್ತಿಗೌಡ, ಜೈಕುಮಾರ್, ಮೂಗೂರಯ್ಯ, ಯಕ್ಷರಾಜು, ಹರೀಶ್, ಗೋಪಿ ಗ್ರಾಪಂ ಪಿಡಿಓ ಬಿ.ಪಿ. ಕುಮಾರ್, ಉಪ ತಹಸೀಲ್ದಾರ್ ವಿಲಿಯಂ, ಗ್ರಾಮಲೆಕ್ಕಿಗೆ ಸುಖನ್ಯ, ಬೆಸ್ಕಾಂ ಜೆಇ ಸಂಜಯ್ ಬೇಗೂರು ಮುಂತಾದವರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss