Friday, August 19, 2022

Latest Posts

ಜನರ ತೀರ್ಪು ಕಾಂಗ್ರೆಸ್ ಪರವಾಗಿಯೇ ಬರಲಿದೆ: ಸಂಸದ ಡಿ.ಕೆ.ಸುರೇಶ್ ವಿಶ್ವಾಸ

ರಾಮನಗರ: ಮುನಿರತ್ನಗೆ ದೇವರು ಒಳ್ಳೆಯದು ಮಾಡಲಿ. ಅವರು ಪವರ್ ಮಿನಿಷ್ಟರ್ ಆಗಲಿ, ಹೋಂ ಆಗಲಿ, ಇಲ್ಲ ಸಿಎಂ ಆಗಲಿ, ನನಗೇನು. ಅವರು ಗೆದ್ಮೇಲೆ ಅದು ನಿರ್ಧಾರವಾಗುತ್ತೆ. ನನ್ನ ಕ್ಷೇತ್ರದಲ್ಲಿ ಸಿಎಂ ಆದ್ರೆ ನನಗೆ ಸಂತೋಷ. ಆದರೆ ನಾನೊಬ್ಬ ಆಶಾವಾದಿ, ಜನರ ತೀರ್ಪು ನಮ್ಮ ಪರವಾಗಿ ಬರಲಿದೆ ಅನ್ನೋ ವಿಶ್ವಾಸವಿದೆ ಎನ್ನುವ ಮೂಲಕ ಮುನಿರತ್ನಗೆ ಸಂಸದ ಡಿ.ಕೆ.ಸುರೇಶ್ ಟಾಂಗ್ ನೀಡಿದರು. ರಾಮನಗರದ ಬಿಡದಿಯ ಖಾಸಗಿ ಕಾಲೇಜಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಈ ಚುನಾವಣೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಈಗಾಗಲೇ ಬಿಜೆಪಿಯಲ್ಲಿ ಆಂತರಿಕ ಗೊಂದಲಗಳು ನಡೆಯುತ್ತಿವೆ. ಚುನಾವಣೆ ಗೆಲ್ಲಲಿ, ಸೋಲಲಿ ಯಾವುದೇ ಕ್ಷಣದಲ್ಲಿ ಭಿನ್ನಮತ ಸ್ಫೋಟವಾಗಬಹುದು ಎಂದು ಭವಿಷ್ಯ ನುಡಿದಿದರು. ಇನ್ನು ಸಿಎಂ ಬದಲಾವಣೆ ಆಗ್ತಾರೆ ಎನ್ನುವ ವಿಚಾರಕ್ಕೆ ಮಾತನಾಡಿದ ಅವರು ಈ ಬಗ್ಗೆ ಬಿಜೆಪಿಯವರೇ ಹೇಳ್ತಿದ್ದಾರೆ. ಆದರೆ ನಮಗೆ ಯಡಿಯೂರಪ್ಪನವರೇ ಸಿಎಂ ಆಗಿರ್ಬೇಕು ಎಂದು ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಕನಕಪುರಕ್ಕೆ ಯಾವುದೇ ಅನುಕೂಲವಿಲ್ಲ. ಈ ಸರ್ಕಾರದಲ್ಲಿ ಕನಕಪುರ ಕ್ಷೇತ್ರಕ್ಕೆ ಒಂದು ಬಿಡಿಗಾಸು ಸಿಕ್ಕಿಲ್ಲ. ಈ ಕುರಿತಾಗಿ ಯಾವ ಮಂತ್ರಿ ಬೇಕಾದರೂ ನೇರವಾಗಿ ಚರ್ಚೆಗೆ ಬಂದರೆ ನಾನು ಸಿದ್ಧ. ಸಿಎಂ ಹಾಗೂ ಮಂತ್ರಿಗಳ ಜೊತೆಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸುರೇಶ್ ಸವಾಲು ಹಾಕಿದರು. ಅವರು ನಮ್ಮನ್ನು ಟಾರ್ಗೆಟ್ ಆದರೂ ಮಾಡಲಿ, ಏನ್ ಬೇಕಾದರೂ ಮಾಡಲಿ. ಈ ಸರ್ಕಾರ ಅಭಿವೃದ್ಧಿ ಪರವಾಗಿ ಇಲ್ಲ. ಬದಲಾಗಿ ಲೂಟಿ ಮಾಡೋಕೆ ಮಾತ್ರ ಇದೇ. ಕಳೆದ ಒಂದು ವರ್ಷದಿಂದ ಕೊರೋನಾ ವಿಚಾರವಾಗಿ ಲೂಟಿ ಮಾಡಿದ್ದಾರೆ. ಜೊತೆಗೆ ಈ ಸರ್ಕಾರದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಈ ಸರ್ಕಾರದ ಭ್ರಷ್ಟ ವ್ಯವಸ್ಥೆಯನ್ನ ದೇಶದ ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆoದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!