ಬೆಂಗಳೂರು: ವಿಶ್ವದಾದ್ಯಂತ 2020ರ ಮೊದಲ ದಿನ 4 ಮಿಲಿಯನ್ ಮಕ್ಕಳ ಜನನವಾಗಿದೆ. ಇದರಲ್ಲಿ ಭಾರತದಲ್ಲಿಯೇ ಅತ್ಯಾಧೀಕ ಮಕ್ಕಳ ಜನನವಾಗಿರುವುದು ವಿಶೇಷ.
2020ರ ಹೊಸ ವರ್ಷಕ್ಕೆ ಕಾಲಿಡುತ್ತಿದಂತೆ ಎಷ್ಟು ಶಿಶುಗಳು ಜನಿಸಿವೆ ಎಂಬ ಅಂಕಿ ಅಂಶವನ್ನು ಯುನೈಟೆಡ್ ನೇಷನ್ಸ್ ಚಿಲ್ಡ್ರನ್ ಫಂಡ್ ಸಂಸ್ಥೆ (UNICEF) ವರದಿ ಬಿಡುಗಡೆ ಮಾಡಿದ್ದು, ಹೊಸ ವರ್ಷದಂದು ಭಾರತದಲ್ಲಿ 67,385 ಮಕ್ಕಳು ಜನಿಸಿದ್ದಾರೆ. ಚೀನಾದಲ್ಲಿ 42,669 ಮಕ್ಕಳ ಜನನವಾಗಿದೆ.
ಭಾರತದಲ್ಲಿ (67.385), ಚೀನಾ (46,299), ನೈಜೀರಿಯಾ (26,039), ಪಾಕಿಸ್ತಾನ (16,787), ಇಂಡೋನೇಷಿಯಾ (13,020), ಅಮೆರಿಕ (10.452), ದಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (10,247) ಮತ್ತು ಇಥಿಯೋಪಿಯಾ (8,493)ದಲ್ಲಿ ಜ.1ರಂದು ಅತಿಹೆಚ್ಚು ಮಕ್ಕಳು ಜನಿಸಿವೆ ಎಂದು ಯುನಿಸೆಫ್ ತಿಳಿಸಿದೆ.
ಭಾರತದ ಮಕ್ಕಳ ಜನಸಂಖ್ಯೆ ಗಮನಿಸಿದಾಗ 2027ರ ಹೊತ್ತಿಗೆ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಮೀರಿಸಲಿದೆ, 2019 ರಿಂದ 2053ರವೆಗೆ 273 ಮಿಲಿಯನ್ ಸಂಖ್ಯೆ ಹೆಚ್ಚಾಗಬಹುದು. ನೈಜೀರಿಯಾ ಜನಸಂಖ್ಯೆ ಕೂಡ ಶೇ.200ರಷ್ಟು ಹೆಚ್ಚಾಗಲಿದೆ. ಈ ಎರಡು ದೇಶಗಳ ಜನಸಂಖ್ಯೆ ವಿಶ್ವದ ಜನಸಂಖ್ಯೆಯಲ್ಲಿಯೇ ಶೇ.23ರಷ್ಟು ಆಗಲಿದೆ.