Thursday, August 18, 2022

Latest Posts

ಜನಾಂಗೀಯ ನಿಂದನೆ ಗೂಂಡಾ ವರ್ತನೆಯ ಪರಮಾವಧಿ: ಅಸಮಾಧಾನ ಹೊರ ಹಾಕಿದ ಕೊಹ್ಲಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಭಾರತೀಯ ಬೌಲರ್​ಗಳಾದ ಮೊಹಮ್ಮದ್ ಸಿರಾಜ್​ ಮತ್ತು ಜಸ್ಪ್ರೀತ್​ ಬುಮ್ರಾ ಅವರನ್ನು ಪ್ರೇಕ್ಷಕರು ಜನಾಂಗೀಯವಾಗಿ ನಿಂದಿಸಿದ್ದು, ಈ ಕುರಿತು ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಜನಾಂಗೀಯ ನಿಂದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಬೌಂಡರಿ ಗೆರೆಯಲ್ಲಿಇಂತಹ ಅಸಹ್ಯವೆನಿಸುವ ಅನೇಕ ಘಟನೆಗಳಿಂದ ಹಾದು ಹೋಗಿರುವುದರಿಂದ ಇದು ರೌಡಿ ವರ್ತನೆಯ ಪರಮಾವಧಿಯಾಗಿದೆ. ಮೈದಾನದಲ್ಲಿ ಇಂತಹ ಘಟನೆ ಸಂಭವಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಘಟನೆಯನ್ನು ಆದಷ್ಟು ತುರ್ತಾಗಿ ಮತ್ತು ಗಂಭೀರತೆಯಿಂದ ನೋಡಬೇಕಾಗಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮುಂದೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮತ್ತೊಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಭಾನುವಾರ ಸಿರಾಜ್​ರನ್ನು ನಿಂದಿಸಿದ ಪ್ರೇಕ್ಷಕರನ್ನು ಮೈದಾನದಿಂದ ಹೊರಕಳುಹಿಸಿ ನ್ಯೂ ​ಸೌತ್​ ವೇಲ್ಸ್​ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆಗೆ ಈಗಾಗಲೇ ಕ್ರಿಕೆಟ್​ ಆಸ್ಟ್ರೇಲಿಯಾ ಭಾರತೀಯರ ಕ್ಷಮೆ ಕೋರಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!