ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಭೀತಿಯಿಂದ ವಿದೇಶಗಳಿಂದ ಚೀನಾಕ್ಕೆ ಆಗಮಿಸುವ ವಿಮಾನಗಳಿಗೆ ಚೀನಾ ಸರ್ಕಾರ ನಿರ್ಬಂಧ ಹೇರಿದೆ.
ಚೀನಾಕ್ಕೆ ತೆರಳುವ ಭಾರತದ ಎಲ್ಲಾ ವಂದೇ ಭಾರತ್ ಮಿಷನ್ ವಿಮಾನಗಳಿಗೂ ಚೀನಾ ನಿರ್ಬಂಧನೆ ಹೇರಿದೆ. ಆದರೆ ತುರ್ತು ಪರಿಸ್ಥಿತಿಯ ವೀಸಾ ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಿದೆ. ಚೀನಾದ ರಾಜತಾಂತ್ರಿಕ ಕಾರ್ಯ, ಸೇವೆ, ಸಿ ವೀಸಾಗಳ ತುರ್ತು ವೀಸಾಗಳನ್ನು ನ.3ರಿಂದ ನೀಡಲಾಗುತ್ತಿದೆ ಎಂದು ಚೀನಾ ತಿಳಿಸಿದೆ.
ಭಾರತದ ವಂದೇ ಭಾರತ್ ಮಿಷನ್ ಸಂಚಾರವನ್ನು ತಾತ್ಕಾಲಿಕವಾಗಿ ತಡೆಯಲಾಗಿದ್ದು, ಈ ವಾರದಲ್ಲಿ ಭಾರತದಿಂದ 4 ವಿಮಾನಗಳು ಹೊರಡಬೇಕಿದ್ದು, ಸದ್ಯ ವಿಮಾನ ಸಂಚಾರವನ್ನು ಪುನಃ ನಿಗದಿ ಮಾಡಲಾಗುತ್ತದೆ.