Saturday, July 2, 2022

Latest Posts

ಜನ ಸೇರಿಸದೆ, ಸಾಂಕೇತಿಕವಾಗಿ ದಸರಾ ಆಚರಣೆ ಮಾಡಿ : ಸರ್ಕಾರಕ್ಕೆ ಡಾ.ಎಸ್.ಎಲ್.ಭೈರಪ್ಪ ಸಲಹೆ

ಮೈಸೂರು: ಜನರನ್ನು ಸೇರಿಸದೆ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸಾಂಕೇತಿಕವಾಗಿ ಮಾಡಿ ಎಂದು ಖ್ಯಾತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಸೋಂಕಿನಿoದ ಜನರು ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಜನರನ್ನು ಸೇರಿಸಿ, ದಸರಾ ಆಚರಿಸುವುದು ಸರಿಯಲ್ಲ, ಸೋಂಕು ಹರಡುವಿಕೆ ತಡೆಯಲು ಹಾಗೂ ಜನರ ಆರೋಗ್ಯದ ದೃಷ್ಠಿಯಿಂದ ಹೆಚ್ಚು ಜನರನ್ನು ಸೇರಿಸದೆ ಸಾಂಕೇತಿಕವಾಗಿ ದಸರಾ ಆಚರಿಸುವುದಕ್ಕೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ದಸರಾ ಆಚರಣೆ ಕೇವಲ ಅರಮನೆ ಹಾಗೂ ಚಾಮುಂಡಿಬೆಟ್ಟಕ್ಕೆ ಮಾತ್ರ ಸೀಮಿತವಾಗಲಿ. ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಲಿ, ಅರಮನೆಯಲ್ಲಿ ರಾಜಮನೆತನದವರು ಪೂಜೆ ಮಾಡಿಕೊಳ್ಳಲಿ. ಜಂಬೂಸವಾರಿ ಮೆರವಣಿಗೆಯನ್ನು ಮಾಡಲಿ, ಚಿನ್ನದ ಅಂಬಾರಿ ಮೇಲೆ ಚಾಮುಂಡೇಶ್ವರಿ ವಿಗ್ರಹವಿಟ್ಟು ಮೆರವಣಿಗೆಯನ್ನು ಆನೆಗಳ ಮಾವುತರು, ಕಾವಾಡಿಗಳು ಮಾತ್ರ ಮಾಡಲಿ, ಆದರೆ ಅದಕ್ಕಾಗಿ ೩೦೦ಕ್ಕೂ ಹೆಚ್ಚು ಜನರನ್ನು ಸೇರಿಸುವ ಅಗತ್ಯವಿಲ್ಲ, ಹೆಚ್ಚು ಜನ ಸೇರಿಸಿ, ಕೊರೋನಾ ಹೆಚ್ಚಾಗಿ ಹರಡಿದರೆ ಯಾರೂ ಜವಾಬ್ದಾರರು ಎಂದು ಪ್ರಶ್ನಿಸಿದರು. ಕೆಲವರು ದಸರಾವನ್ನು ಜನ ಸೇರಿಸದೆ ಆಚರಿಸಿದರೆ ಬಿಜಿನೆಸ್ ಹಾಳಾಗುತ್ತದೆ ಎಂದು ಹೇಳುತ್ತಿದ್ದಾರೆ. ಇವರ ಬಿಜಿನೆಸ್‌ಗಾಗಿ ಜನರು ತೊಂದರೆ ಅನುಭವಿಸಬೇಕೇ, ಕೊರೋನಾದಂತಹ ಪರಿಸ್ಥಿತಿಯಲ್ಲಿ ಜನರ ಆರೋಗ್ಯ ಕಾಪಾಡುವುದು ಮುಖ್ಯವಾಗಿದೆ. ಹಾಗಾಗಿ ಜನರ ಗುಂಪು ಸೇರಿಸಿ ದಸರಾ ಆಚರಿಸುವುದು ಬೇಡಾ, ಪೂಜೆಗೆ ಮಾತ್ರ ದಸರಾ ಆಚರಣೆಯನ್ನು ಸೀಮಿತಗೊಳಿಸಬೇಕು, ಬೇಕಾದರೆ ಮೈಸೂರಿನಲ್ಲಿ ದೀಪಾಲಂಕಾರವಿರಲಿ, ಆದರೆ ಅದನ್ನು ನೋಡಲು ಜನರು ಗುಂಪು ಸೇರದಂತೆ ನೋಡಿಕೊಳ್ಳಲಿ ಎಂದು ಕಿವಿ ಮಾತು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss