ಟೋಕಿಯೋ: ಜಪಾನ್ ಆಡಳಿತ ಪಕ್ಷದ ನಾಯಕ ಯೋಶಿಹಿಡೆ ಸುಗಾ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಸಂಸತ್ತಿನ ಮತದಾನದಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಯೋಶಿಹಿಡೆ ಸುಗಾ ಅವರು ಹಿಂದಿನ ಪ್ರಧಾನಿ ಅಬೆ ಅವರ ಮಿತ್ರರಾಗಿದ್ದಾರೆ.
ಅಬೆ ಅವರ ಹಿಂದಿನ ನೀತಿಗಳನ್ನೇ ಯೋಶಿಹಿಡೆ ಸುಗಾ ಅವರೂ ನಡೆಸಿಕೊಂಡು ಹೋಗುವ ನಿರೀಕ್ಷೆ ಎಲ್ಲರಿಗೂ ಇದೆ. ಅನಾರೋಗ್ಯದ ಹಿನ್ನೆಲೆ ಹಿಂದಿನ ಪ್ರಧಾನಿ ಶಿಂಜೋ ಅಬೆ ಕಳೆದ ತಿಂಗಳು ರಾಜೀನಾಮೆ ನೀಡಿದ್ದು, ಯೋಶಿಹಿಡೆ ಸುಗಾ ಅವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.